ಹಾವೇರಿಯಲ್ಲಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು: ನಿಟ್ಟುಸಿರು ಬಿಟ್ಟ ಕಡೂರು ರೈತರು
ಹಾವೇರಿ ಜಿಲ್ಲೆಯ ಕಡೂರು ಗ್ರಾಮದಲ್ಲಿ ರೈತರಿಗೆ ಕೊನೆಗೂ ಚಿರತೆ ಕಾಟದಿಂದ ಮುಕ್ತಿ ಸಿಕ್ಕಿದೆ. ಕೃಷಿ ಕೆಲಸಕ್ಕೆ ಹೋಗಲು ಭಯಭೀತರಾಗಿದ್ದ ರೈತರನ್ನು ಅರಣ್ಯ ಇಲಾಖೆ ಇದೀಗ ಚಿರತೆ ಸೆರೆ ಹಿಡಿಯುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸಿಸಿಟಿವಿಯಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯ ಸೆರೆಯಾದ ನಂತರ, ಬೋನು ಇಟ್ಟು ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಹಾವೇರಿ, ಡಿ.4: ರಾಜ್ಯದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಹಲವು ಕಡೆ ಚಿರತೆ ದಾಳಿಗಳಿಂದ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ರೈತರನ್ನ ನಿದ್ರೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದ್ದಿದ್ದಾರೆ. ಕಡೂರು ಗ್ರಾಮದ ಗುಡ್ಡದ ಸಮೀಪದ ರೈತರ ಜಮೀನಿನಲ್ಲಿ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ನಿರಂತರವಾಗು ಅಡ್ಡಾಡುತ್ತಿದ್ದ ಚಿರತೆ ಕಾರಣ ರೈತರು ಚಿರತೆ ಭಯದಿಂದ ಕೃಷಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು.ಕಳೆದ ವಾರದ ತೋಟದ ಮನೆಯೊಂದರ ಸಿಸಿಟಿವಿಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಇದೀಗ ಚಿರತೆಯನ್ನು ಪತ್ತೆ ಮಾಡಿ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ