Karnataka Assembly Polls; ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅಂತ ಹೆಚ್ ಡಿ ದೇವೇಗೌಡರ ನಿರ್ಣಯ ಅಂತಿಮ: ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ

Karnataka Assembly Polls; ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅಂತ ಹೆಚ್ ಡಿ ದೇವೇಗೌಡರ ನಿರ್ಣಯ ಅಂತಿಮ: ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Apr 03, 2023 | 12:19 PM

ತಮ್ಮ ಪತ್ನಿ ಭವಾನಿ ರೇವಣ್ಣಗೆ  ಟಿಕೆಟ್ ಪಡೆಯಲು ಹೊಳೆನರಸೀಪುರ ಶಾಸಕ ಶತಾಯ ಗತಾಯ ಪ್ರಯತ್ನದಲ್ಲಿದ್ದಾರೆ.

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅನ್ನೋದು ಇವತ್ತಿಗೂ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಹೊಳೆನರಸೀಪುರದಲ್ಲಿ ತಮ್ಮ ಹಿರಿಯ ಪುತ್ರ ಸೂರಜ್ ರೇವಣ್ಣ ಜೊತೆ ಇಂದು ಪ್ರಚಾರ ಕಾರ್ಯ ಆರಂಭಿಸಿದ ಹೆಚ್ ಡಿ ರೇವಣ್ಣ (HD Revanna) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಟಿಕೆಟ್ ಯಾರಿಗೆ ಅಂತ ಸ್ಪಷ್ಟನೆ ನೀಡಲಿಲ್ಲ. ಟಿಕೆಟ್ ಕುರಿತು ಹೆಚ್ ಡಿ ದೇವೇಗೌಡ (HD Devegowda) ಹಾಗೂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ಚರ್ಚಿಸಿದ್ದು, ದೇವೇಗೌಡರ ನಿರ್ಣಯವೇ ಅಂತಿಮ ಎಂದು ರೇವಣ್ಣ ಹೇಳಿದರು. ತಮ್ಮ ಪತ್ನಿ ಭವಾನಿ ರೇವಣ್ಣಗೆ  ಟಿಕೆಟ್ ಪಡೆಯಲು ಹೊಳೆನರಸೀಪುರ ಶಾಸಕ ಶತಾಯ ಗತಾಯ ಪ್ರಯತ್ನದಲ್ಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.