Budget Session: ಗ್ಯಾರಂಟಿಗಳ ಜಾರಿ ವಿಷಯದಲ್ಲಿ ಸರ್ಕಾರವನ್ನು ಹಣಿಯಲು ಆರ್ ಅಶೋಕಗೆ ಹೆಚ್ ಡಿ ಕುಮಾರಸ್ವಾಮಿ ಸಾಥ್!
ಸ್ಪೀಕರ್ ಅಶೋಕಗೆ ಮಾತಾಡಲು ಅವಕಾಶ ಕಲ್ಪಿಸಿದಾಗ ಶಾಸಕರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ ಬೇಷರತ್ ಗ್ಯಾರಂಟಿಗಳು ಈಗ ಷರತ್ತುಗಳೊಂದಿಗೆ ಜಾರಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ ಗ್ಯಾರಂಟಿಗಳ ಅನುಷ್ಠಾನ ಕುರಿತು ಪ್ರತಿಪಕ್ಷ ನಾಯಕರು ಸದನದಲ್ಲಿ ಎದ್ದು ನಿಂತು ಪ್ರಶ್ನಿಸಿದಾಗೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಬೇರೆ ಸಚಿವರು ಪಲಾಯನ ಮಾರ್ಗವಾಗಿ ಸಿಡಿದೇಳುತ್ತಿದ್ದಾರೆ. ಬಿಜೆಪಿ ಶಾಸಕ ಆರ್ ಆಶೋಕ (R Ashoka) ನಿಲುವಳಿ ಪ್ರಸ್ತಾವ ಮಂಡಿಸುವಾಗ ಕಾಂಗ್ರೆಸ್ ನಾಯಕರು ಕಳೆದ 3 ದಿನಗಳಿಂದ ಮಾಡುತ್ತಿರುವಂತೆ ವಿರೋಧ ವ್ಯಕ್ತಪಡಿಸಿದರು. ಅಗಲೇ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಅಶೋಕ ಪರವಾಗಿ ಮಾತಾಡಿ ಅವರಿಗೆ ಪ್ರಸ್ತಾವ ಮಂಡಿಸಲು ಅವಕಾಶ ನೀಡಬೇಕೆಂದು ಸ್ಪೀಕರ್ ಯುಟಿ ಖಾದರ್ ಅವರನ್ನು ವಿನಂತಿಸಿಕೊಂಡರು. ಸ್ಪೀಕರ್ ಅಶೋಕಗೆ ಮಾತಾಡಲು ಅವಕಾಶ ಕಲ್ಪಿಸಿದಾಗ ಶಾಸಕರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ ಬೇಷರತ್ ಗ್ಯಾರಂಟಿಗಳು ಈಗ ಷರತ್ತುಗಳೊಂದಿಗೆ ಜಾರಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ