Anna Bhagya Scheme: ಯಾವುದೋ ಒಬ್ಬ ಅಧಿಕಾರಿಗೆ ಲಕ್ಷಗಟ್ಟಲೆ ಟನ್ ಅಕ್ಕಿ ಮೂಟೆ ಕಳಿಸುವ ಅಧಿಕಾರವಿರುತ್ತದೆಯೇ? ಹೆಚ್ ಡಿ ಕುಮಾರಸ್ವಾಮಿ
ನಿಗಮದ ಅಧಿಕಾರಿಯೊಂದಿಗೆ ಒಬ್ಬ ರಾಜ್ಯದ ಮುಖ್ಯಮಂತ್ರಿ ಪತ್ರ ವ್ಯವಹಾರ ನಡೆಸಿದರೆ ಅಕ್ಕಿ ಪೂರೈಕೆಯಾಗೋದು ಅಸಾಧ್ಯ ಎಂದು ಕುಮಾರಸ್ವಾಮು ಹೇಳಿದರು
ಬೆಂಗಳೂರು: ಚೆನ್ನಪಟ್ಟಣ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅನ್ನಭಾಗ್ಯ ಯೋಜನೆ (Anna Bhagya scheme) ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಉಡಾಫೆ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಜರಿದರು. ಭಾರತೀಯ ಆಹಾರ ನಿಗಮದ ಅಧಿಕಾರಿಯೊಂದಿಗೆ ಒಬ್ಬ ರಾಜ್ಯದ ಮುಖ್ಯಮಂತ್ರಿ ಪತ್ರ ವ್ಯವಹಾರ ನಡೆಸಿದರೆ ಅಕ್ಕಿ ಪೂರೈಕೆಯಾಗೋದು ಅಸಾಧ್ಯ, ಮುಖ್ಯಮಂತ್ರಿ ತಮ್ಮ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರನ್ನು ದೆಹಲಿಗೆ ಕಳಿಸಿ, ಕೇಂದ್ರದಲ್ಲಿ ಸಂಬಂಧಪಟ್ಟ ಸಚಿವ ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸೋದು ಕ್ರಮಬಧ್ಧ ಪದ್ಧತಿ ಅನಿಸಿಕೊಳ್ಳುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಲಕ್ಷಾನುಗಟ್ಟಲೆ ಟನ್ ಅಕ್ಕಿಮೂಟೆಗಳನ್ನು ರಾಜ್ಯವೊಂದಕ್ಕೆ ಕಳಿಸುವ ಅಧಿಕಾರ ಒಬ್ಬ ಅಧಿಕಾರಿಗೆ ಇರುತ್ತದೆಯೇ? ಇಂಥ ಸಣ್ಣ ವಿಚಾರ ಮುಖ್ಯಮಂತ್ರಿಗಳ ತಲೆಗೆ ಹೊಳೆಯಲಿಲ್ಲವೇ ಎಂದು ಅವರು ಪ್ರಶ್ನಿಸಿದರು. ಈ ತೆರನಾದ ಬೇಕಾಬಿಟ್ಟಿ ಧೋರಣೆಯಿಂದ ಮುಖ್ಯಮಂತ್ರಿ ಹೊರಬರಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ