ಕುಮಾರಸ್ವಾಮಿ ಆರೋಪಕ್ಕೆ ಸಾಥ್ ನೀಡಿದ ರೇವಣ್ಣ; ಅಶ್ವಥ್ ನಾರಾಯಣ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ
ಅದಕ್ಕೆ ಪೂರಕವಾಗಿ ಕುಮಾರಸ್ವಾಮಿ ಅವರ ಸಹೋದರ ಹೆಚ್ ಡಿ ರೇವಣ್ಣ ಅವರು ಅಕ್ರಮ ನಡೆದಿರುವ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ, ಅವುಗಳನ್ನು ಒದಗಿಸುತ್ತೇವೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayana) ಅವರ ವಿರುದ್ಧ ಬಿಎಮ್ ಎಸ್ ಕಾಲೇಜು ಟ್ರಸ್ಟ್ ನ (BMS College Trust) ಜಮೀನು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗುರುವಾರ ಸದನದಲ್ಲಿ ಆಗ್ರಹಿಸಿದ್ದರು. ಅದಕ್ಕೆ ಪೂರಕವಾಗಿ ಕುಮಾರಸ್ವಾಮಿ ಅವರ ಸಹೋದರ ಹೆಚ್ ಡಿ ರೇವಣ್ಣ (HD Revanna) ಅವರು ಅಕ್ರಮ ನಡೆದಿರುವ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ, ಅವುಗಳನ್ನು ಒದಗಿಸುತ್ತೇವೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.