ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್

Edited By:

Updated on: Jul 20, 2025 | 3:34 PM

ಬೆಂಗಳೂರು ಇಂದು ವರುಣನ ಆಗಮನವಾಗಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಂದು ವಿಧಾನಸೌಧ, ರೇಸ್ ಕೋರ್ಸ್, ಮೆಜೆಸ್ಟಿಕ್ ಮುಂತಾದ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಅತ್ತ ಮೈಸೂರಿನಲ್ಲೂ ದಿಢೀರ್​ ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ವಿಡಿಯೋ ನೋಡಿ.

ಬೆಂಗಳೂರು, ಜುಲೈ 20: ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಹಾನಗರದ ಹಲವೆಡ ಜೋರು ಮಳೆ (rain) ಸುರಿದೆ. ವಿಧಾನಸೌಧ, ರೇಸ್ ಕೋರ್ಸ್, ಮೆಜೆಸ್ಟಿಕ್, ರೇಸ್ ಕೋರ್ಸ್, ಶೇಷಾದ್ರಿಪುರಂ ಸುತ್ತಮುತ್ತ ಮಳೆ ಆಗಿದೆ. ಮಳೆಯಿಂದ ರಾಜಧಾನಿ ಮತ್ತಷ್ಟು ಕೂಲ್ ಕೂಲ್ ಆಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.