Video: ಕಲಬುರಗಿಯಲ್ಲಿ ಭಾರೀ ಮಳೆ: ಮೈಬುಂದಿ ಹರಿಯುತ್ತಿದೆ ಎತ್ತಪೋತಾ ಜಲಪಾತ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 20, 2023 | 8:11 PM

ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದೆ. ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ್ತಾ ಕಿರು ಜಲಪಾತ ಮೈಬುಂದಿ ಹರಿಯುತ್ತಿದೆ.

ಕಲಬುರಗಿ, ಜುಲೈ 20: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆ (Heavy rain) ಆಗುತ್ತಿದೆ. ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರುವ ಎತ್ತಪೋತ್ತಾ ಕಿರು ಜಲಪಾತ ಮೈಬುಂದಿ ಹರಿಯುತ್ತಿದೆ. ಕಳೆದ ಕೆಲ ತಿಂಗಳಿಂದ ಮಳೆ ಇಲ್ಲದೆ, ಎತ್ತಪೋತ್ತಾ ಕಿರು ಜಲಪಾತ ಬರಿದಾಗಿತ್ತು. ಆದರೆ ಸದ್ಯ ಕುಂಚಾವರಂ ಭಾಗದಲ್ಲಿ ಭಾರೀ ಮಳೆಯಿಂದ ಎತ್ತಪೋತ್ತಾ ಕಿರು ಜಲಪಾತ ತುಂಬಿ ಹರಿಯುತ್ತಿದೆ. ಜನರು ಜಲಪಾತ ನೋಡಲು ಮುಗಿಬಿಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 8:10 pm, Thu, 20 July 23

Follow us on