Heavy downpour in city: ಬೆಂಗಳೂರಲ್ಲಿ ಬೆಳಗಿನ ಹೊತ್ತು ಸುರಿದ ಧಾರಾಕಾರ ಮಳೆ, ಶಾಲಾ ಮಕ್ಕಳಿಗೆ ಎದುರಾದ ತಾಪತ್ರಯ
ಮಂಗಳವಾರ ಬೆಳಗ್ಗೆ 6 ಗಂಟೆಗೆಲ್ಲ ಶುರುವಾಗಿದ್ದ ಜಿನುಗು ಮಳೆ 8.30 ರಿಂದ ಧೋ ಅಂತ ಸುರಿಯಲಾರಂಭಿಸಿತು.
ಬೆಂಗಳೂರು: ನಗರದ ನಿವಾಸಿಗಳ (city residents) ಮುಖದಲ್ಲಿ ಇಂದು ಬೆಳ್ಳಬೆಳಗ್ಗೆಯೇ ಸಂತಸ ಮಿಶ್ರಿತ ಆತಂಕ. ಮಳೆ ಸುರಿಯಲಾರಂಭಿಸಿದ್ದು ಅವರಲ್ಲಿ ಸಂತೋಷ ಉಂಟು ಮಾಡಿದರೆ, ಮಳೆಯಲ್ಲಿ ಆಫೀಸು ತಲುಪುವುದು ಹೇಗೆ ಅಂತ ಚಿಂತೆ ಕೂಡ ಹುಟ್ಟಿಕೊಂಡಿತ್ತು. ಪೋಷಕರು ಮಕ್ಕಳನ್ನು ಶಾಲೆಗಳಿಗೆ (schools) ತಲುಪಿಸಲು ಹರಸಾಹಸ ಪಡಬೇಕಾಯಿತು. ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯ ಬಳಿಕ ನಗರದಲ್ಲಿ ಮಳೆಯ ಸುಳಿವಿರಲಿಲ್ಲ. ಮಂಗಳವಾರ ಬೆಳಗ್ಗೆ 6 ಗಂಟೆಗೆಲ್ಲ ಶುರುವಾಗಿದ್ದ ಜಿನುಗು ಮಳೆ 8.30 ರಿಂದ ಧೋ ಅಂತ ಸುರಿಯಲಾರಂಭಿಸಿತು. ಮೋಡ ಯಾವ ಪರಿ ನಗರದ ಮೇಲೆ ಆವರಿಸಿಕೊಂಡಿತ್ತೆಂದರೆ, ಬಿಎಮ್ ಟಿಸಿ ಬಸ್ ಗಳೊಳಗೆ (BMTC buses) ದೀಪಗಳನ್ನು ಆನ್ ಮಾಡಬೇಕಾಯಿತು. ಹವಾಮಾನ ಇಲಾಖೆ ವರದಿ ಪ್ರಕಾರ ರಾಜಧಾನಿಯಲ್ಲಿ ಮುಂದಿನ ಎರಡು ದಿನ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡು, ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆಯೆಂದು ವರದಿ ಹೇಳಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos