81ನೇ ವಯಸ್ಸಿಯಲ್ಲಿ MA ಪರೀಕ್ಷೆ ಬರೆದ ಕರ್ನಾಟಕದ ಅಜ್ಜ, ಇವರ ಎಕ್ಸಾಂ ತಯಾರಿ ಹೇಗಿತ್ತು ಕೇಳಿ

|

Updated on: Jun 18, 2023 | 5:52 PM

ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿ ಕೊಟ್ಟಿದ್ದಾರೆ. ಹೌದು...ಮೊಮ್ಮಕ್ಕಳನ್ನು ಆಡಿಸೋ ವಯಸ್ಸಿನಲ್ಲಿ ಎಂಎ ಪರೀಕ್ಷೆ ಬರೆಯುವ ಮೂಲಕ ಯುವಕರಿಗೆ ಸ್ಫೂರ್ತಿಯಾಗುದ್ದಾರೆ.

ವಿಜಯಪುರ: ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿ ಕೊಟ್ಟಿದ್ದಾರೆ. ಹೌದು.. ಹೌದು…ಮೊಮ್ಮಕ್ಕಳನ್ನು ಆಡಿಸೋ ವಯಸ್ಸಿನಲ್ಲಿ ಎಂಎ ಪರೀಕ್ಷೆ ಬರೆಯುವ ಮೂಲಕ ಯುವಕರಿಗೆ ಸ್ಫೂರ್ತಿಯಾಗುದ್ದಾರೆ. ವಿಜಯಪುರ ನಗರದ ಬಿಎಲ್ ಡಿಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ (ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ) ಪರೀಕ್ಷೆಯಲ್ಲಿ ಎಂಎಂ ಇಂಗ್ಲೀಷ್ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಎನ್ನುವವರು ಗಮನ ಸೆಳೆದಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ನಿಂಗಯ್ಯ ಒಡೆಯರ ಅವರದ್ದು ಇದು 5ನೇ ಸ್ನಾತಕೋತ್ತರ ಪರೀಕ್ಷೆಯಾಗಿದ್ದು, ಇವರ ಓದಿನ ಆಸಕ್ತಿ ಮತ್ತು ಪರೀಕ್ಷಾ ಸಿದ್ದತೆಗಳಿಗೆ ಇವರ ಪತ್ನಿ ಕೂಡಾ ಸಾಥ್ ನೀಡುತ್ತಿದ್ದಾರೆ.

Published On - 5:51 pm, Sun, 18 June 23