ಫ್ರೀ ಕರೆಂಟ್​ ಗೃಹಜ್ಯೋತಿ ಯೋಜನೆ ಅರ್ಜಿಗೆ ಏನೇನ್ ದಾಖಲೆ ಬೇಕು? ಇಲ್ಲಿದೆ ನೋಡಿ

ಗೃಹಜ್ಯೋತಿ ಯೋಜನೆಗೆ ಇಂದಿನಿಂದಲೇ(ಜೂನ್ 19) ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇಲ್ಲಿ ನೋಂದಣಿ ಮಾಡಿಕೊಂಡ್ರೆ ಮಾತ್ರ ಮುಂದಿನ ತಿಂಗಳಿನಿಂದಲೇ ಉಚಿತ ವಿದ್ಯುತ್‌ ಸಿಗಲಿದೆ. ಇದಕ್ಕೆ ಏನೆಲ್ಲ ದಾಖಲೆಗಳು ಬೇಕು ಎನ್ನುವುದನ್ನು ಬೆಸ್ಕಾಂ ಸಿಬ್ಬಂದಿ ಮಾತನ್ನು ಕೇಳಿ.

ಫ್ರೀ ಕರೆಂಟ್​ ಗೃಹಜ್ಯೋತಿ ಯೋಜನೆ ಅರ್ಜಿಗೆ ಏನೇನ್ ದಾಖಲೆ ಬೇಕು? ಇಲ್ಲಿದೆ ನೋಡಿ
|

Updated on: Jun 18, 2023 | 4:19 PM

ಬೆಂಗಳೂರು: ಕಾಂಗ್ರೆಸ್​ನ 200 ಯುನಿಟ್​ ಉಚಿತ ವಿದ್ಯುತ್​ ನೀಡುವ ಗೃಹಜ್ಯೋತಿ ಯೋಜನೆ(Gruha Jyoti Scheme) ಅಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಬೆಂಗಳೂರಿನ ಎಂ.ಜಿ.ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ವೆಬ್​ಸೈಟ್​ ವಿಳಾಸ https://sevasindhugs.karnataka.gov.in. ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಿ ಎಂದು ಇಂಧನ ಇಲಾಖೆ ಹೇಳಿದೆ. ಇನ್ನು ಅರ್ಜಿ ಸಲ್ಲಿಕೆ ಏನೆಲ್ಲ ಬೇಕು ಎನ್ನುವುದನ್ನು ಅಧಿಕಾರಿಗಳ ಬಾಯಿಂದಲೇ ಕೇಳಿ.

Follow us