‘ಮಗು ಅಂದ್ರೆ ದುಡ್ಡು ಮಾಡೋ ವಸ್ತು ಅಲ್ಲ’; ಸೋನು ಶ್ರೀನಿವಾಸ ಗೌಡಗೆ ತರಾಟೆ

|

Updated on: Mar 22, 2024 | 1:17 PM

ಸೋನು ಶ್ರೀನಿವಾಸ ಗೌಡ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆಯದೆ ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸೋನು ಶ್ರೀನಿವಾಸ ಗೌಡ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದುವೇ ಅವರ ಬಂಧನಕ್ಕೆ ಕಾರಣ.

ಸೋನು ಶ್ರೀನಿವಾಸ ಗೌಡ (Sonu Srinivas Gowda) ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆಯದೆ ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ರಾಯಚೂರು ಮೂಲದ ಏಳು ವರ್ಷದ ಹೆಣ್ಣುಮಗಳು ಇವಳಾಗಿದ್ದು, ಕೇಸ್ ಬಲವಾಗಿದೆ. ಈ ರೀತಿ ದತ್ತು ಪಡೆಯಲು ಅದರದ್ದೇ ಆದ ನಿಯಮಗಳು ಇರುತ್ತವೆ. ಆದರೆ, ಇದನ್ನು ಸೋನು ಶ್ರೀನಿವಾಸ ಗೌಡ ಗಾಳಿಗೆ ತೂರಿದ್ದಾರೆ. ಮತ್ತೊಂದೆಡೆ ಅವಳ ಜೊತೆ ಕಂಟೆಂಟ್​ಗಳನ್ನು ಮಾಡಿ ಯೂಟ್ಯೂಬ್​ಗೆ ವಿಡಿಯೋಗಳನ್ನು ಸೋನು ಹಾಕುತ್ತಿದ್ದರು. ಇದು ಕಾನೂನು ಬಾಹಿರ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಹೇಳಿದ್ದಾರೆ. ‘ಮಗು ಅಂದ್ರೆ ದುಡ್ಡು ಮಾಡೋ ವಸ್ತು ಅಲ್ಲ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ