ವಿವಾದಕ್ಕೂ ಸೋನು ಶ್ರೀನಿವಾಸ್ ಗೌಡಗೂ ಇದೆ ಹಳೆಯ ನಂಟು

Sonu Srinivas Gowda: ಸೋನು ಶ್ರೀನಿವಾಸ ಗೌಡ ಟಿಕ್ ಟಾಕ್ ವಿಡಿಯೋ ಮಾಡಿ ಫೇಮಸ್ ಆದವರು. ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡೋಕೆ ಆರಂಭಿಸಿದರು. ಆ ಬಳಿಕ ಅವರ ಖಾಸಗಿ ವಿಡಿಯೋ ವೈರಲ್ ಆಯಿತು. ಈ ವಿಡಿಯೋ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ವಿವಾದಕ್ಕೂ ಸೋನು ಶ್ರೀನಿವಾಸ್ ಗೌಡಗೂ ಇದೆ ಹಳೆಯ ನಂಟು
ಸೋನು ಶ್ರೀನಿವಾಸ ಗೌಡ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 22, 2024 | 11:19 AM

ಟಿಕ್ ಟಾಕ್ ವಿಡಿಯೋ ಹಾಗೂ ರೀಲ್ಸ್ ಮಾಡಿ ಫೇಮಸ್ ಆದ ನಂತರ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT) ಅವಕಾಶ ಪಡೆದುಕೊಂಡವರು ಸೋನು ಶ್ರೀನಿವಾಸ ಗೌಡ. ಈಗ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈ ಮಧ್ಯೆ ಅವರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅವರು ಅರೆಸ್ಟ್ ಆಗಿದ್ದಾರೆ. ಸೋನು ಶ್ರೀನಿವಾಸ ಗೌಡಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ಈ ಮೊದಲು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು.

ಸೋನು ಶ್ರೀನಿವಾಸ ಗೌಡ ಟಿಕ್ ಟಾಕ್ ವಿಡಿಯೋ ಮಾಡಿ ಫೇಮಸ್ ಆದವರು. ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡೋಕೆ ಆರಂಭಿಸಿದರು. ಆ ಬಳಿಕ ಅವರ ಖಾಸಗಿ ವಿಡಿಯೋ ವೈರಲ್ ಆಯಿತು. ಈ ವಿಡಿಯೋ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಪಡ್ಡೆಗಳ ಮೊಬೈಲ್​ನಲ್ಲಿ ಈ ವಿಡಿಯೋ ಹರಿದಾಡಿತು. ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಎಲ್ಲರೂ ನೆಗೆಟಿವ್ ಆಗಿ ಕಮೆಂಟ್ ಹಾಕೋಕೆ ಆರಂಭಿಸಿದರು. ಈ ಕಾರಣಕ್ಕೆ ಅವರು ಕಮೆಂಟ್ ಆಯ್ಕೆಯನ್ನೇ ಕೆಲವು ಸಮಯ ಆಫ್ ಮಾಡಿದರು.

ಆ ಬಳಿಕ ಸೋನುಗೆ ಬಿಗ್ ಬಾಸ್​ಗೆ ಅವಕಾಶ ಬಂತು. ಅವರನ್ನು ಬಿಗ್ ಬಾಸ್​ಗೆ ಕರೆಸಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದೂ ಇದೆ. ಬಿಗ್ ಬಾಸ್​ಗೆ ಹೋದ ಬಳಿಕ ಅವರ ಮೇಲೆ ಇದ್ದ ಅಭಿಪ್ರಾಯ ಒಂದಷ್ಟು ಜನರಿಗೆ ಬದಲಾಯಿತು. ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದರು. ಯಾವುದೋ ಹುಡುಗ ನಂಬಿಸಿ ಮೋಸ್ ಮಾಡಿದ್ದಾಗಿ, ವಿಡಿಯೋ ಲೀಕ್ ಆಗಲು ಅವನೇ ಕಾರಣ ಎಂದು ಸೋನು ಹೇಳಿಕೊಂಡಿದ್ದರು. ಆದರೆ, ಒಂದು ವರ್ಗದ ಜನರು ಅವರನ್ನು ಈಗಲೂ ಟೀಕೆ ಮಾಡುತ್ತಾರೆ. ಮಾಲ್ಡೀವ್ಸ್​ನಲ್ಲಿ ಬಿಕಿನಿ ಹಾಕಿ ಅವರು ಟೀಕೆಗೆ ಒಳಗಾಗಿದ್ದೂ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಇತ್ತೀಚೆಗೆ ಸೋನು ಶ್ರೀನಿವಾಸ ಗೌಡ ನೆಗೆಟಿವ್ ಕಮೆಂಟ್​ಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಹಾಯಾಗಿ ಇದ್ದರು. ಆದರೆ, ಈಗ ಅರೆಸ್ಟ್ ಆಗುವ ಮೂಲಕ ಅವರು ಮತ್ತೆ ಸುದ್ದಿ ಆಗಿದ್ದಾರೆ. ಅವರು ದೊಡ್ಡ ವಿವಾದವನ್ನೇ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ಎಫ್​ಐಆರ್​ನಲ್ಲಿ​ ಉಲ್ಲೇಖವಾದ ವಿಚಾರಗಳೇನು?

ಸೋನು ಅವರು ಇತ್ತೀಚೆಗೆ ಮಗುವನ್ನು ದತ್ತು ಪಡೆದಿದ್ದಾರೆ. ಆದರೆ, ಇದಕ್ಕೆ ಯಾವುದೇ ಕಾನೂನು ಕ್ರಮವನ್ನು ಪಾಲಿಸಿಲ್ಲ. ಮಗು ಇಷ್ಟವಾಯಿತು ಎಂದು ಅವಳ ಅಮ್ಮನ ಬಳಿ ಮಾತನಾಡಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ, ಅವರ ವಿರುದ್ಧ ದೂರು ದಾಖಲಾಯಿತು. ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡು ಅವರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ