‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಯಶ್​ ಫೋಟೋಗಳು ಲೀಕ್​

ಯಶ್​ ನಟನೆಯ ‘ಟಾಕ್ಸಿಕ್​’ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರತಂಡದಿಂದ ಸಿಗುವ ಅಪ್​ಡೇಟ್​ಗಳಿಗಾಗಿ ಅಭಿಮಾನಿಗಳು ಕಾದಿದ್ದಾರೆ. ಸದ್ಯ ಲೀಕ್​ ಆಗಿರುವ ಫೋಟೋ ಮತ್ತು ವಿಡಿಯೋವನ್ನು ಫ್ಯಾನ್ಸ್​ ಪೇಜ್​ಗಳಲ್ಲಿ ಹಂಚಿಕೊಳ್ಳಲಾಗಿದೆ. ಗೀತು ಮೋಹನ್​ದಾಸ್​ ಅವರ ನಿರ್ದೇಶನದಲ್ಲಿ ‘ಟಾಕ್ಸಿಕ್​’ ಸಿನಿಮಾ ಸಿದ್ಧವಾಗುತ್ತಿದೆ.

‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಯಶ್​ ಫೋಟೋಗಳು ಲೀಕ್​
‘ಟಾಕ್ಸಿಕ್​’ ಚಿತ್ರೀಕರಣದ ಸೆಟ್​ನಿಂದ ಫೋಟೋ ಲೀಕ್​
Follow us
ಮದನ್​ ಕುಮಾರ್​
|

Updated on: Mar 22, 2024 | 10:48 PM

‘ರಾಕಿಂಗ್​ ಸ್ಟಾರ್​’ ಯಶ್ (Yash)​ ಅವರ ಸಂಪೂರ್ಣ ಗಮನ ಈಗ ‘ಟಾಕ್ಸಿಕ್​’ ಸಿನಿಮಾದ ಮೇಲಿದೆ. ಅಭಿಮಾನಿಗಳು ಸಹ ಹಗಲು-ರಾತ್ರಿ ಇದೇ ಸಿನಿಮಾದ ಜಪ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಹು ದೊಡ್ಡ ಗೆಲುವಿನ ಬಳಿಕ ಯಶ್​ ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ಟಾಕ್ಸಿಕ್​’ (Toxic Movie) ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಮಾಡಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಚಿತ್ರೀಕರಣದ ಸೆಟ್​ನಿಂದ ಕೆಲವು ಫೋಟೋಗಳು ಲೀಕ್​ (Toxic Photo Leak) ಆಗಿವೆ.

ಯಶ್​ ಅವರ ಗುರಿ ದೊಡ್ಡದಾಗಿದೆ. ಯಾವಾಗಲೂ ಅವರು ದೊಡ್ಡದಾಗಿ ಆಲೋಚನೆ ಮಾಡುತ್ತಾರೆ. ಅವರ ಮುಂದಿನ ನಡೆ ಹೇಗಿರಲಿದೆ ಎಂಬುದೇ ಎಲ್ಲರ ಕೌತುಕ. ‘ಕೆಜಿಎಫ್​ 2’ ನಂತರ ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಇದರ ಸಿದ್ಧತೆ ಜೋರಾಗಿ ನಡೆದಿತ್ತು. ಶೂಟಿಂಗ್​ ಕೂಡ ಅಷ್ಟೇ ಕಾಳಜಿಯಿಂದ ನಡೆಯುತ್ತಿದೆ. ಪ್ರತಿಯೊಂದು ಅಪ್​ಡೇಟ್​ ತಿಳಿಯಲು ಫ್ಯಾನ್ಸ್​​ ಕಾದಿದ್ದಾರೆ.

‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಶಾರುಖ್​ ಖಾನ್​? ನಡೆದಿದೆ ದೊಡ್ಡ ಪ್ಲ್ಯಾನ್​

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆದ ಬಳಿಕ ಯಶ್​ ಜೊತೆ ಸಿನಿಮಾ ಮಾಡಲು ಪರಭಾಷೆಯ ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು, ಅನೇಕ ಸ್ಟಾರ್​ ಡೈರೆಕ್ಟರ್​ಗಳು ಮುಂದೆ ಬಂದರು. ಆದರೆ ಯಶ್​ ಆಯ್ಕೆ ಬೇರೆಯೇ ಆಗಿತ್ತು. ‘ಕೆವಿಎನ್​ ಪ್ರೊಡಕ್ಷನ್ಸ್’ ಹಾಗೂ ನಿರ್ದೇಶಕಿ ಗೀತು ಮೋಹನ್​ದಾಸ್​ ಜೊತೆ ಅವರು ಕೈ ಜೋಡಿಸಿದರು. ಸದ್ಯಕ್ಕೆ ಈ ಚಿತ್ರತಂಡದಿಂದ ಹೊರಬಂದಿರುವುದು ಟೈಟಲ್​ ಟೀಸರ್​ ಮಾತ್ರ. ಅಷ್ಟರಲ್ಲೇ ಭಾರಿ ಹೈಪ್​ ಸೃಷ್ಟಿ ಆಗಿದೆ.

ಸದ್ಯ ‘ಟಾಕ್ಸಿಕ್​’ ಶೂಟಿಂಗ್​ ಸೆಟ್​ನಿಂದ ಲೀಕ್​ ಆಗಿರುವ ​ಫೋಟೋ ಮತ್ತು ವಿಡಿಯೋದಲ್ಲಿ ಹೆಚ್ಚೇನೂ ವಿಶೇಷತೆ ಇಲ್ಲ. ಆದರೂ ಯಶ್​ ಅಭಿಮಾನಿಗಳು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಹಬ್ಬ ಮಾಡುತ್ತಿದ್ದಾರೆ. ‘ನಾವು ದೊಡ್ಡ ಹಿಟ್​ ನಿರೀಕ್ಷಿಸಿದ್ದೇವೆ. ತುಂಬ ಎಗ್ಸೈಟ್​ ಆಗಿದ್ದೇವೆ’ ಎಂಬ ಕ್ಯಾಪ್ಷನ್​ನೊಂದಿಗೆ ಯಶ್​ ಅವರ ಫ್ಯಾನ್​ ಪೇಜ್​ನಲ್ಲಿ ಈ ಫೋಟೋವನ್ನು ಶೇರ್​ ಮಾಡಿಕೊಳ್ಳಲಾಗಿದೆ.

ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ಯಶ್​ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಇತ್ತೀಚೆಗೆ ರಾಧಿಕಾ ಪಂಡಿತ್​ ಅವರು ಕೆಲವು ಫೋಟೋ ಹಂಚಿಕೊಂಡಿದ್ದಾರೆ. ಯಶ್​ ಮತ್ತು ರಾಧಿಕಾ ದಂಪತಿಯ ಫೋಟೋವನ್ನು ಪುತ್ರಿ ಆಯ್ರಾ ಕ್ಲಿಕ್ಕಿಸಿದ್ದಾಳೆ. ‘ನನ್ನ ಹೊಸ ಪರ್ಸನಲ್​ ಫೋಟೋಗ್ರಾಫರ್​’ ಎಂದು ರಾಧಿಕಾ ಪಂಡಿತ್​ ಅವರು ಇದಕ್ಕೆ ಕ್ಯಾಪ್ಷನ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್