‘ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್ಟಿಆರ್; ಫ್ಯಾನ್ಸ್ಗೆ ನೆನಪಾಯ್ತು ‘ಕಾಂತಾರ’ ಲುಕ್
ಅನೇಕರಿಗೆ ಜೂನಿಯರ್ ಎನ್ಟಿಆರ್ ಫೋಟೋ ನೋಡಿದ ಬಳಿಕ ‘ಕಾಂತಾರ’ ಸಿನಿಮಾ ನೆನಪಾಗಿದೆ. ‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಲುಕ್ ಇದೇ ರೀತಿ ಇದೆ. ಈ ಕಾರಣಕ್ಕೆ ಅನೇಕರು ‘ಕಾಂತಾರ ಎರಡನೇ ಭಾಗದಲ್ಲಿ ರಿಷಬ್ ಶೆಟ್ಟಿ’ ಎಂದು ಫನ್ ಆಗಿ ಟ್ವೀಟ್ ಮಾಡಿದ್ದಾರೆ.
‘ದೇವರ: ಪಾರ್ಟ್ 1’ ’ (Devara Movie Part 1) ಸಿನಿಮಾ ಸಾಕಷ್ಟು ಸದ್ದು ಮಾಡಿದ ಚಿತ್ರ. 2024ರ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಈ ಚಿತ್ರಕ್ಕೂ ಸ್ಥಾನ ಇದೆ. ಈ ಚಿತ್ರದ ಬಗ್ಗೆ ಒಂದಿಲ್ಲೊಂದು ಅಪ್ಡೇಟ್ ಸಿಗುತ್ತಲೇ ಇರುತ್ತದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಸೆಟ್ನ ಎಚ್ಡಿ ಫೋಟೋ ಒಂದು ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೂನಿಯರ್ ಎನ್ಟಿಆರ್ ಅವರು ರಾ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕರಿಗೆ ‘ಕಾಂತಾರ’ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಲುಕ್ ನೆನಪಾಗಿದೆ.
ಜೂನಿಯರ್ ಎನ್ಟಿಆರ್ ನಟನೆಯ ‘ಆರ್ಆರ್ಆರ್’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಜೂನಿಯರ್ ಎನ್ಟಿಆರ್ ಅವರು ಚಿತ್ರದ ಅವಾರ್ಡ್ ಫಂಕ್ಷನ್ಗಳಲ್ಲಿ ಭಾಗಿ ಆದರು. ‘ಆರ್ಆರ್ಆರ್’ ಚಿತ್ರ ಹಲವು ಅವಾರ್ಡ್ ಗೆದ್ದಿದೆ. ಈ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಅವಾರ್ಡ್ನಲ್ಲಿ ಪ್ರಶಸ್ತಿ ಗೆದ್ದಿದೆ. ಇದಾದ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಸಿನಿಮಾ ಘೋಷಣೆ ಮಾಡಿದರು. ಬಾಲಿವುಡ್ನ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಜೂನಿಯರ್ ಎನ್ಟಿಆರ್ ಅವರ ‘ದೇವರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಈ ಚಿತ್ರದ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಕೊರಿಯೋಗ್ರಾಫರ್ ರಾಜು ಸುಂದರಮ್ ಹಾಗೂ ನಿರ್ದೇಶಕ ಕೊರಟಾಲ ಶಿವ ಇದ್ದಾರೆ. ಈ ಫೋಟೋ ವೈರಲ್ ಆಗಿದೆ. ಜೂನಿಯರ್ ಎನ್ಟಿಆರ್ ಅವರ ಲುಕ್ ಗಮನ ಸೆಳೆದಿದೆ.
ಅನೇಕರಿಗೆ ಜೂನಿಯರ್ ಎನ್ಟಿಆರ್ ಫೋಟೋ ನೋಡಿದ ಬಳಿಕ ‘ಕಾಂತಾರ’ ಸಿನಿಮಾ ನೆನಪಾಗಿದೆ. ‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಲುಕ್ ಇದೇ ರೀತಿ ಇದೆ. ಈ ಕಾರಣಕ್ಕೆ ಅನೇಕರು ‘ಕಾಂತಾರ ಎರಡನೇ ಭಾಗದಲ್ಲಿ ರಿಷಬ್ ಶೆಟ್ಟಿ’ ಎಂದು ಫನ್ ಆಗಿ ಟ್ವೀಟ್ ಮಾಡಿದ್ದಾರೆ.
ಅನೇಕರಿಗೆ ಜೂನಿಯರ್ ಎನ್ಟಿಆರ್ ಫೋಟೋ ನೋಡಿದ ಬಳಿಕ ‘ಕಾಂತಾರ’ ಸಿನಿಮಾ ನೆನಪಾಗಿದೆ. ‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಲುಕ್ ಇದೇ ರೀತಿ ಇದೆ. ಈ ಕಾರಣಕ್ಕೆ ಅನೇಕರು ‘ಕಾಂತಾರ ಎರಡನೇ ಭಾಗದಲ್ಲಿ ರಿಷಬ್ ಶೆಟ್ಟಿ’ ಎಂದು ಫನ್ ಆಗಿ ಟ್ವೀಟ್ ಮಾಡಿದ್ದಾರೆ.
#JrNTR Joins The Set of #Kantara 2🌝 pic.twitter.com/l5fXhIUSp1
— Sidಅರ್ಥ (@SidNeregal) March 22, 2024
ಸದ್ಯ ‘ದೇವರ’ ಸಿನಿಮಾದ ಸಾಂಗ್ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಇದಕ್ಕೆ ರಾಜು ಸುಂದರಂ ಅವರು ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏಪ್ರಿಲ್ನಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ಕೆಲಸ ಪೂರ್ಣಗೊಳ್ಳದ ಕಾರಣ ಚಿತ್ರದ ಕೆಲಸವನ್ನು ಅಕ್ಟೋಬರ್ 10ಕ್ಕೆ ಮುಂದೂಡಲಾಗಿದೆ. ‘ಎನ್ಟಿಆರ್ ಆರ್ಟ್ಸ್’ ಮೂಲಕ ಕಲ್ಯಾಣ್ ರಾಮ್ ಅವರು ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಸುಧಾಕರ್ ಮಿಕ್ಕಿಲಿನೇನಿ ಹಾಗೂ ಕೊಸರಾಜು ಹರಿಕೃಷ್ಣನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಂದಿ ಮಂದಿಗೆ ಪರಿಚಯಗೊಳ್ಳಲು ಹೊಸ ತಂತ್ರದ ಮೊರೆ ಹೋದ ಜೂನಿಯರ್ ಎನ್ಟಿಆರ್
ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಲಿದ್ದಾರೆ. ಇದು ಬಾಲಿವುಡ್ ಸಿನಿಮಾ ಎನ್ನುವ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 60 ದಿನಗಳ ಕಾಲ್ಶೀಟ್ ನೀಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ