ಕಾರ್ತಿಕ್ ಮಹೇಶ್​​ಗೆ ಇನ್ನೂ ಸಿಕ್ಕಿಲ್ಲ ‘ಬಿಗ್ ಬಾಸ್’ ಕಾರ್; ಕಾರಣ ವಿವರಿಸಿದ ನಟ

‘ಬಿಗ್ ಬಾಸ್’ ವಿನ್ ಆದವರಿಗೆ ಈ ಬಾರಿ 50 ಲಕ್ಷ ರೂಪಾಯಿ, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬ್ರೇಜಾ ಕಾರು  ಸಿಕ್ಕಿತ್ತು. ಆದರೆ, ಇನ್ನೂ ಕಾರು ಅವರ ಕೈ ಸೇರಿಲ್ಲವಂತೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ವೈರಲ್ ಆಗಿದೆ.

ಕಾರ್ತಿಕ್ ಮಹೇಶ್​​ಗೆ ಇನ್ನೂ ಸಿಕ್ಕಿಲ್ಲ ‘ಬಿಗ್ ಬಾಸ್’ ಕಾರ್; ಕಾರಣ ವಿವರಿಸಿದ ನಟ
ಕಾರ್ತಿಕ್ ಮಹೇಶ್
Follow us
ರಾಜೇಶ್ ದುಗ್ಗುಮನೆ
|

Updated on: Mar 23, 2024 | 11:02 AM

ನಟ ಕಾರ್ತಿಕ್ ಮಹೇಶ್ (Karthik Mahesh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಆಗಿ ಹೊರ ಹೊಮ್ಮಿದರು. ಅವರ ಖ್ಯಾತಿ ಹೆಚ್ಚಿದೆ. ಅವರ ಹಿಂಬಾಲಕರ ಸಂಖ್ಯೆ ದೊಡ್ಡದಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಲಕ್ಷಾಂತರ ಫಾಲೋವರ್ಸ್ ಸಿಕ್ಕಿದ್ದಾರೆ. ಹಲವು ಸಿನಿಮಾ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಯಾವುದೂ ಇನ್ನೂ ಫೈನಲ್ ಆಗಿಲ್ಲ. ಈ ಮಧ್ಯೆ ಕಾರ್ತಿಕ್ ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಬಿಗ್ ಬಾಸ್’ ವಿನ್ ಆದವರಿಗೆ ಈ ಬಾರಿ 50 ಲಕ್ಷ ರೂಪಾಯಿ, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬ್ರೇಜಾ ಕಾರು  ಸಿಕ್ಕಿತ್ತು. ಆದರೆ, ಇನ್ನೂ ಕಾರು ಅವರ ಕೈ ಸೇರಿಲ್ಲವಂತೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ವೈರಲ್ ಆಗಿದೆ. ‘ಸ್ಪೀಡ್ ಪ್ಲಸ್ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಿಎಂನ ಭೇಟಿ ಮಾಡಿದ ಕಾರ್ತಿಕ್ ಮಹೇಶ್; ‘ಒಳ್ಳೆಯದಾಗಲಿ’ ಎಂದು ಹಾರೈಸಿದ ಸಿದ್ದರಾಮಯ್ಯ

ಕಾರ್ತಿಕ್ ಮಹೇಶ್ ಅವರು ಕಿರುತೆರೆ ನಟನಾಗಿ, ಸಿನಿಮಾ ರಂಗದ ನಾಯಕನಾಗಿ ಗಮನ ಸೆಳೆದವರು. ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾದಲ್ಲಿ ಕಾರ್ತಿಕ್ ನಟಿಸಿದ್ದರು. ಈ ಚಿತ್ರ ಗಮನ ಸೆಳೆಯಿತು. ಈ ಚಿತ್ರದಿಂದ ಕಾರ್ತಿಕ್ ಖ್ಯಾತಿ ಹೆಚ್ಚಿತು. ಬಿಗ್ ಬಾಸ್​ಗೆ ಬಂದ ಬಳಿಕ ಅವರ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಿದೆ. ಈಗ ಅವರು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ.

View this post on Instagram

A post shared by @chumu_chumu__

‘ಬಿಗ್ ಬಾಸ್​ನಿಂದ ಗೆದ್ದ ಹಣ ಹಂತಹಂತವಾಗಿ ಬರುತ್ತಿದೆ. ಗೆದ್ದ ಕಾರು ಇನ್ನೂ ಬಂದಿಲ್ಲ. ನಾಲ್ಕೈದು ತಿಂಗಳು ಬೇಕು ಎಂದು ಹೇಳಿದ್ದಾರೆ. ದೆಹಲಿಯಿಂದ ಒಪ್ಪಿಗೆ ಸಿಕ್ಕಿ ಬರಬೇಕು’ ಎಂದು ಅವರು ಹೇಳಿಕೊಂಡಿದ್ದರು. ಈ ವಿಡಿಯೋಗೆ ಅನೇಕರು ಬೇಸರ ಹೊರಹಾಕಿದ್ದಾರೆ. ಕಾರ್ತಿಕ್​ಗೆ ಬೇಗ ಕಾರು ಸಿಗಲಿ ಎಂದು ಅನೇಕರು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್