‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಶಾರುಖ್​ ಖಾನ್​? ನಡೆದಿದೆ ದೊಡ್ಡ ಪ್ಲ್ಯಾನ್​

‘ರಾಕಿಂಗ್​ ಸ್ಟಾರ್​’ ಯಶ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಯಶಸ್ಸಿನ ಬಳಿಕ ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್​’ ಮೇಲೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಅಚ್ಚರಿಯ ಸುದ್ದಿ ಹರಿದಾಡುತ್ತಿದೆ. ದೊಡ್ಡ ಸ್ಟಾರ್​ ಕಲಾವಿದರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲಿದ್ದು, ಚಿತ್ರತಂಡದವರು ಈಗಾಗಲೇ ಮಾತುಕಥೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಜೊತೆ ಶಾರುಖ್​ ಖಾನ್​? ನಡೆದಿದೆ ದೊಡ್ಡ ಪ್ಲ್ಯಾನ್​
ಶಾರುಖ್​ ಖಾನ್​, ಟಾಕ್ಸಿಕ್​ ಪೋಸ್ಟರ್​, ಯಶ್​
Follow us
ಮದನ್​ ಕುಮಾರ್​
|

Updated on: Feb 05, 2024 | 6:05 PM

ಪ್ಯಾನ್ ಇಂಡಿಯಾ ಸ್ಟಾರ್​ ಆಗಿರುವ ಯಶ್​ (Yash) ಅವರು ಸದ್ಯ ‘ಟಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಬಹಳ ದೊಡ್ಡದು. ಪ್ರತಿ ದಿನವೂ ಈ ಚಿತ್ರದ ಬಗ್ಗೆ ಒಂದಿಲ್ಲೊಂದು ಗಾಸಿಪ್​ ಕೇಳಿಬರುತ್ತಲೇ ಇದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್​ ಖಾನ್​ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅದನ್ನು ಚಿತ್ರತಂಡ ಖಚಿತಪಡಿಸಿಲ್ಲ. ಈಗ ‘ಟಾಕ್ಸಿಕ್​’ (Toxic) ಸಿನಿಮಾದ ಪಾತ್ರವರ್ಗಕ್ಕೆ ಶಾರುಖ್​ ಖಾನ್​ ಸೇರ್ಪಡೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಶಾರುಖ್​ ಖಾನ್​ (Shah Rukh Khan) ಮತ್ತು ಯಶ್​ ಅವರು ಜೊತೆಯಾಗಿ ನಟಿಸಿದ್ದೇ ಹೌದಾದರೆ ಈ ಸಿನಿಮಾದ ಕ್ರೇಜ್​ ಮುಗಿಲು ಮುಟ್ಟಲಿದೆ.

‘ಟಾಕ್ಸಿಕ್​’ ಸಿನಿಮಾಗೆ ಗೀತು ಮೋಹನ್​ದಾಸ್​ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ಅವರನ್ನು ಹೊರತುಪಡಿಸಿ ಬೇರೆ ಕಲಾವಿದರ ಆಯ್ಕೆ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಅಷ್ಟರಲ್ಲಾಗಲೇ ಅನೇಕ ಅಂತೆ-ಕಂತೆಗಳು ಕೇಳಿಬರಲು ಆರಂಭಿಸಿವೆ. ವರದಿಗಳ ಪ್ರಕಾರ, ಚಿತ್ರತಂಡದವರು ಈಗಾಗಲೇ ಶಾರುಖ್​ ಖಾನ್​ ಜೊತೆ ಮಾತುಕತೆ ನಡೆಸಿದ್ದಾರೆ. ಅತಿಥಿ ಪಾತ್ರ ಮಾಡುವಂತೆ ಅವರ ಬಳಿ ಕೇಳಲಾಗಿದೆ ಎಂಬ ಸುದ್ದಿ ಹರಡಿದೆ.

ಇದನ್ನೂ ಓದಿ: ‘ಟಾಕ್ಸಿಕ್​’ ಚಿತ್ರದಲ್ಲಿ ಯಶ್​ ಜೊತೆ ನಟಿಸುತ್ತಾರಾ ಸಾಯಿ ಪಲ್ಲವಿ, ಶೃತಿ ಹಾಸನ್​?

ಇದು ಅತಿಥಿ ಪಾತ್ರ ಆಗಿದ್ದರೂ ಕೂಡ ದೊಡ್ಡ ಸ್ಟಾರ್​ ನಟರೇ ಇದನ್ನು ಮಾಡಬೇಕಿದೆ. ಹಾಗಾಗಿ ಶಾರುಖ್​ ಖಾನ್​ ಅವರನ್ನು ‘ಟಾಕ್ಸಿಕ್​’ ತಂಡ ಭೇಟಿ ಮಾಡಿದೆ ಎಂಬ ಮಾತು ಕೇಳಿಬಂದಿದೆ. ಶಾರುಖ್​ ಖಾನ್​ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕು. ‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಕೆಜಿಎಫ್​ 2’ ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ಆಸ್ಕರ್​ ಪ್ರಶಸ್ತಿ ಮೇಲೆ ಯಶ್​ ಕಣ್ಣು? ‘ಟಾಕ್ಸಿಕ್​’ ಸಿನಿಮಾ ಹಿಂದಿನ ಲೆಕ್ಕಾಚಾರ ಹೀಗಿದೆ..

ಶಾರುಖ್​ ಖಾನ್​ ಅವರು ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕಳೆದ ವರ್ಷ ಅವರು ನಟಿಸಿದ ‘ಪಠಾಣ್​’, ‘ಜವಾನ್​’, ‘ಡಂಕಿ’ ಸಿನಿಮಾಗಳು ಯಶಸ್ಸು ಕಂಡಿವೆ. ಅದರಿಂದ ಅವರ ಚಾರ್ಮ್​ ಹೆಚ್ಚಾಗಿದೆ. ಆ ಕಾರಣದಿಂದಲೇ ‘ಟಾಕ್ಸಿಕ್​’ ತಂಡದವರು ಶಾರುಖ್​ ಖಾನ್​ಗೆ ಈ ಅತಿಥಿ ಪಾತ್ರವನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಶಾರುಖ್​ ಖಾನ್​ ಅವರು ಈವರೆಗೂ ದಕ್ಷಿಣ ಭಾರತದ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಒಂದು ವೇಳೆ ಅವರು ‘ಟಾಕ್ಸಿಕ್​’ ಚಿತ್ರವನ್ನು ಒಪ್ಪಿಕೊಂಡರೆ ದಕ್ಷಿಣ ಭಾರತದಲ್ಲಿ ಇರುವ ಅವರ ಅಭಿಮಾನಿಗಳಿಗೆ ಹಬ್ಬ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್