ಅಂದುಕೊಂಡ ದಿನದಂದೇ ಸೆಟ್ಟೇರಲಿದೆ ‘ರಿಚರ್ಡ್ ಆಂಟನಿ’; ಬಂಡವಾಳ ಹೂಡೋದು ಯಾರು?
ರಕ್ಷಿತ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ‘ಉಳಿದವರು ಕಂಡಂತೆ’ ರಿಲೀಸ್ ಆಗಿದ್ದು 2014ರ ಮಾರ್ಚ್ 28ರಂದು. ಈ ಸಿನಿಮಾ ಥಿಯೇಟರ್ನಲ್ಲಿ ಸದ್ದು ಮಾಡಿಲ್ಲ. ಆದರೆ, ನಂತರ ಈ ಚಿತ್ರವನ್ನು ಮೊಬೈಲ್ನಲ್ಲಿ ನೋಡಿ ಅನೇಕರು ಮೆಚ್ಚಿಕೊಂಡರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಇದಕ್ಕೆ ‘ರಿಚರ್ಡ್ ಆಂಟನಿ’ ಶೀರ್ಷಿಕೆ ನೀಡಲಾಗಿದೆ.
ರಕ್ಷಿತ್ ಶೆಟ್ಟಿ (Rakshit Shetty) ಅವರು ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ನಟನೆಯ ಜೊತೆಗೆ ನಿರ್ದೇಶನದ ಮೇಲೂ ಸಾಕಷ್ಟು ಆಸಕ್ತಿ ಇದೆ. 2014ರಲ್ಲಿ ಅವರು ‘ಉಳಿದವರು ಕಂಡಂತೆ’ ಸಿನಿಮಾ ನಿರ್ದೇಶನ ಮಾಡಿದರು. ಇದಾದ ಬಳಿಕ ಅವರಿಗೆ ನಿರ್ದೇಶನ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಈಗ ಈ ಚಿತ್ರದ ಸೀಕ್ವೆಲ್ ‘ರಿಚರ್ಡ್ ಆಂಟನಿ’ಗೆ (Richard Anthony) ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಒಂದು ವದಂತಿ ಹರಿದಾಡಿದೆ. ‘ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುವ ನಿರ್ಧಾರವನ್ನು ಕೈ ಬಿಟ್ಟಿದೆ’ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರ ಸುಳ್ಳು ಎನ್ನಲಾಗುತ್ತಿದೆ. ತಂಡದವರು ಅಂದುಕೊಂಡ ದಿನಾಂಕದಂದೇ ಸಿನಿಮಾ ಸೆಟ್ಟೇರಲಿದೆ.
‘ರಿಚರ್ಡ್ ಆಂಟನಿ’ ಸಿನಿಮಾ ಘೋಷಣೆ ಆಗಿ ಎರಡು ವರ್ಷಗಳೇ ಕಳೆದಿವೆ. ಈವರೆಗೆ ಸಿನಿಮಾ ಸೆಟ್ಟೇರಿಲಿಲ್ಲ. ರಕ್ಷಿತ್ ಶೆಟ್ಟಿ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದು ಇದಕ್ಕೆ ಪ್ರಮುಖ ಕಾರಣ. ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುವುದಿಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ‘ಹೊಂಬಾಳೆ ಫಿಲ್ಮ್ಸ್’ ರಿಲೀಸ್ ಮಾಡಿದ ‘ರಾಘವೇಂದ್ರ ಸ್ಟೋರ್ಸ್’ ಅಂದುಕೊಂಡ ರೀತಿ ಯಶಸ್ಸು ಕಂಡಿಲ್ಲ. ‘ಸಲಾರ್’ ದೊಡ್ಡ ಮಟ್ಟದಲ್ಲಿ ಹವಾ ಮಾಡಲೇ ಇಲ್ಲ. ‘ರಿಚರ್ಡ್ ಆಂಟನಿ’ 100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಇಷ್ಟು ದೊಡ್ಡ ಮೊತ್ತದಲ್ಲಿ ಬಂಡವಾಳ ಹಾಕಲು ಹೊಂಬಾಳೆ ಸಿದ್ಧವಿಲ್ಲ ಎನ್ನಲಾಗಿತ್ತು. ಆದರೆ, ಇದು ಕೇವಲ ವದಂತಿ ಎನ್ನಲಾಗುತ್ತಿದೆ.
ಮಾರ್ಚ್ 28ಕ್ಕೆ ‘ಉಳಿದವರು ಕಂಡಂತೆ’ ಸಿನಿಮಾ ರಿಲೀಸ್ ಆಗಿ 10 ವರ್ಷಗಳು ಕಳೆಯಲಿವೆ. ‘ರಿಚರ್ಡ್ ಆಂಟನಿ’ ಸಿನಿಮಾ ಅಂದು ಸೆಟ್ಟೇರಲಿದೆಯಂತೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಸಿನಿಮಾ ತಂಡದಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ಹಿಂದಿಗೆ ರಿಮೇಕ್ ಆಗಲಿದೆ ರಕ್ಷಿತ್ ಶೆಟ್ಟಿ ನಟನೆಯ SSE? ಮಾತುಕತೆಗೆ ಬಂದ ಖ್ಯಾತ ನಿರ್ಮಾಪಕ
‘ಉಳಿದವರು ಕಂಡಂತೆ’ ಸಿನಿಮಾ ರಿಲೀಸ್ ಆಗಿದ್ದು 2014ರ ಮಾರ್ಚ್ 28ರಂದು. ಇದು ರಕ್ಷಿತ್ ನಿರ್ದೇಶನ ಮಾಡಿದ ಮೊದಲ ಸಿನಿಮಾ. ಈ ಚಿತ್ರ ಥಿಯೇಟರ್ನಲ್ಲಿ ಸದ್ದು ಮಾಡಿಲ್ಲ. ಆದರೆ, ನಂತರ ಈ ಚಿತ್ರವನ್ನು ಮೊಬೈಲ್ನಲ್ಲಿ ನೋಡಿ ಅನೇಕರು ಮೆಚ್ಚಿಕೊಂಡರು. ಈ ಸಿನಿಮಾ ರಿಲೀಸ್ ಆದ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದಿಂದ ದೂರವೇ ಇದ್ದು ನಟನೆ ಹಾಗೂ ನಿರ್ಮಾಣದಲ್ಲಿ ಬ್ಯುಸಿ ಆದರು. ಈಗ ‘ರಿಚರ್ಡ್ ಆಂಟನಿ’ ಸಿನಿಮಾ ಮೂಲಕ ಮತ್ತೆ ಅವರು ಡೈರೆಕ್ಷನ್ಗೆ ಮರಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ