ಹಿಂದಿಗೆ ರಿಮೇಕ್ ಆಗಲಿದೆ ರಕ್ಷಿತ್ ಶೆಟ್ಟಿ ನಟನೆಯ SSE? ಮಾತುಕತೆಗೆ ಬಂದ ಖ್ಯಾತ ನಿರ್ಮಾಪಕ
ದಕ್ಷಿಣ ಭಾರತದ ಹಲವು ಕತೆಗಳನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಈಗ ಕರಣ್ ಜೋಹರ್ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಆಲೋಚನೆಯಲ್ಲಿ ಇದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ (SSE) ಸಿನಿಮಾ ಎರಡು ಪಾರ್ಟ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಸೈಡ್ ಎ ಹಾಗೂ ಸೈಡ್ ಬಿ ಜನರಿಗೆ ಇಷ್ಟ ಆಗಿದೆ. ಅನೇಕರು ಚಿತ್ರವನ್ನು ಮೆಚ್ಚಿದ್ದಾರೆ. ನಿರ್ದೇಕ ಹೇಮಂತ್ ರಾವ್ ಅವರ ಕಾರ್ಯವೈಖರಿಯನ್ನು ಜನರು ಇಷ್ಟಪಟ್ಟಿದ್ದಾರೆ. ಭಾವನಾತ್ಮಕವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಚಿತ್ರ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ ಎಂದು ವರದಿ ಆಗಿದೆ. ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ರಕ್ಷಿತ್ ಶೆಟ್ಟಿ ಆ್ಯಂಡ ಟೀಂ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಭಾರತದ ಹಲವು ಕತೆಗಳನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಈ ಪೈಕಿ ಹಲವು ಸಿನಿಮಾಗಳು ಹಿಟ್ ಆಗಿವೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೇಲೆ ಕರಣ್ ಜೋಹರ್ ಕಣ್ಣಿಟ್ಟಿದ್ದಾರೆ. ಕನ್ನಡದಲ್ಲಿ ಹಿಟ್ ಆಗಿರುವುದರಿಂದ ಹಿಂದಿ ಜನರ ಎದುರು ಈ ಕಥೆಯನ್ನು ನೀಡುವ ಆಲೋಚನೆ ಮಾಡಿದ್ದಾರೆ. ಒಂದೇ ಚಿತ್ರವಾಗಿ ಇದನ್ನು ಪ್ರೇಕ್ಷಕರ ಮುಂದೆ ಇಡಬಹುದಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಿಂದಿಯಲ್ಲಿ ಅದೇ ತಂತ್ರ ಉಪಯೋಗಿಸಲಾಗುತ್ತದೆಯೇ ಅಥವಾ ಪಾರ್ಟ್ ಎ ಹಾಗೂ ಬಿ ಆಗಿ ಸಿನಿಮಾ ನಿರ್ಮಾಣ ಆಗುತ್ತದೆಯೇ ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ.
ಈ ಮೊದಲು ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾದ ಹಿಂದಿ ಹಕ್ಕನ್ನು ನಿರ್ಮಾಪಕರೊಬ್ಬರು ಖರೀದಿ ಮಾಡಿದ್ದರು. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ ಎಂದು ಹೇಳಲಾಯಿತು. ಆದರೆ, ಸಿನಿಮಾ ನಿಂತಲ್ಲೇ ನಿಂತಿದೆ. ಕನ್ನಡದಲ್ಲಿ ಚಿತ್ರ ರಿಲೀಸ್ ಆಗಿ ಏಳು ವರ್ಷ ಕಳೆದರೂ ರಿಮೇಕ್ ಕೆಲಸ ಆರಂಭ ಆಗಿಲ್ಲ.
ಇದನ್ನೂ ಓದಿ: SSE Side B: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ತಂಡಕ್ಕೆ ‘ಕತ್ತೆ’ ಎಂದು ಹೊಗಳಿದ ಕಿಚ್ಚ ಸುದೀಪ್
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಯಿತು. ಸೈಡ್ ಬಿ ನವೆಂಬರ್ 17ರಂದು ಬಿಡುಗಡೆ ಆಗಿದೆ. ಹೇಮಂತ್ ರಾವ್ ಅವರ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಗಮನ ಸೆಳೆದಿದೆ. ಸಿನಿಮಾದ ಹಾಡುಗಳು ಹಿಟ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Tue, 28 November 23