ಚಿಕ್ಕಮಗಳೂರಿನ ಲೋಕವಳ್ಳಿಯಲ್ಲಿ ವಸತಿಗೆ ಮಂಜೂರಾದ ಜಾಗದಲ್ಲಿ ಚರ್ಚ್ ನಿರ್ಮಿಸಲಾಗುತ್ತಿದೆ; ಹಿಂದೂ ಕಾರ್ಯಕರ್ತರ ದೂರು

|

Updated on: Aug 07, 2023 | 11:38 AM

ಬಡವರಿಗೆ ಆಮಿಷಗಳನ್ನೊಡ್ಡಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಮತ್ತು ಅಕ್ರಮವಾಗಿ ಚರ್ಚ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರೊಬ್ಬರು ಆರೋಪಿಸಿದರು.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಲ್ಲಿರುವ ಲೋಕವಳ್ಳಿ ಹೆಸರಿನ ಗ್ರಾಮದಲ್ಲಿ ಮನೆಗೋಸ್ಕರ ಮಂಜೂರಾಗಿದ್ದ ಜಾಗದಲ್ಲಿ ಕ್ರಿಶ್ಚಿಯನ್ ಸಮುದಾಯದ (Christian community) ವ್ಯಕ್ತಿಯೊಬ್ಬರು ಚರ್ಚ್ ನಿರ್ಮಿಸುತ್ತಿದ್ದಾರೆಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು (Hindu activists) ಆರೋಪಿಸುತ್ತಿವೆ. ಹಾಂದಿ ಗ್ರಾಮದ ರಂಗ (Ranga) ಹೆಸರಿನ ವ್ಯಕ್ತಿ ಇಗರ್ಜಿ ನಿರ್ಮಿಸುತ್ತಿದ್ದಾರೆಂದು ಹೇಳಲಾಗಿದೆ. ಚರ್ಚ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕೆಂದು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪಟ್ಟು ಹಿಡಿದಿದ್ದು ಲೋಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಜಂರಂಗ ದಳದ ಕಾರ್ಯಕರ್ರೊಬ್ಬರು, ಈ ಭಾಗದಲ್ಲಿ, ಬಡವರಿಗೆ ಆಮಿಷಗಳನ್ನೊಡ್ಡಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಮತ್ತು ಅಕ್ರಮವಾಗಿ ಚರ್ಚ್ ಗಳನ್ನು ನಿರ್ಮಿಸಲಾಗುತ್ತಿದೆ, ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಜರುಗಿಸದಿದ್ದರೆ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ನೇರವಾಗಿ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on