ನೆಲಮಂಗಲ: ಪತ್ನಿಯನ್ನು ಗ್ರಾಪ ಪಂಚಾಯಿತಿ ಅಧ್ಯಕ್ಷೆಯಾಗಿಸುವ ಕಸರತ್ತು ನಡೆಸಿದ್ದ ಪತಿ ಗುರಿ ಈಡೇರುವ ಮೊದಲೇ ರಸ್ತೆ ಅಪಘಾತಕ್ಕೆ ಬಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2023 | 12:22 PM

ಕೇಶವ್ ರೆಡ್ಡಿ ತನ್ನ ಅಣ್ಣ ರಾಮರೆಡ್ಡಿಯ ಫ್ಯಾಕ್ಟರಿ ಕಡೆ ಕಳೆದ ರಾತ್ರಿ ಹೋಗುತ್ತಿದ್ದಾಗ ಡಾಬಸ್ ಪೇಟೆ ಬಳಿ ಅವರ ಕಾರಿಗೆ ಕ್ಯಾಂಟರ್ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ರೆಡ್ಡಿ ಮತ್ತು ಶ್ರೀನಿವಾಸ್ ಹೆಸರಿನ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ನೆಲಮಂಗಲ: ತಾನೊಂದು ಬಗೆದರೆ ಮಾನವ ಬೇರೊಂದು ಬಗೆಯಿತು ದೈವ ಅಂತ ಹಳೆಯ ಕನ್ನಡ ಸಿನಿಮಾ ಹಾಡೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂಗೊಂಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಮರಾವತಿ (Amaravati) ಬದುಕಿನಲ್ಲಿ ನಡೆದಿದ್ದು ಅದೇ. ಜೆಡಿಎಸ್ ಪಕ್ಷದ (JDS Party) ಅಮರಾವತಿಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯನ್ನಾಗಿ ಮಾಡಲು ಅವರ ಪತಿ ಕೇಶವ್ ರೆಡ್ಡಿ (Keshav Reddy) ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಿರೋಧ ಪಕ್ಷದವರು ಪಕ್ಷದ ಚುನಾಯಿತ ಸದಸ್ಯರನ್ನು ಸೆಳೆದುಕೊಳ್ಳುವುದು ತಪ್ಪಿಸಲು ಒಟ್ಟು 8 ಜನರನ್ನು ಶಿರ್ಡಿ, ಮುಂಬೈ ಟ್ರಿಪ್ ಕರೆದುಕೊಂಡು ಹೋಗಿ ನಿನ್ನೆ ರಾತ್ರಿಯಷ್ಟೇ ವಾಪಸ್ಸಾಗಿದ್ದರು. ಅಮರಾವತಿ ಹೇಳುವಂತೆ, ಕೇಶವ್ ರೆಡ್ಡಿ ತನ್ನ ಅಣ್ಣ ರಾಮರೆಡ್ಡಿಯ ಫ್ಯಾಕ್ಟರಿ ಕಡೆ ಕಳೆದ ರಾತ್ರಿ ಹೋಗುತ್ತಿದ್ದಾಗ ಡಾಬಸ್ ಪೇಟೆ ಬಳಿ ಅವರ ಕಾರಿಗೆ ಕ್ಯಾಂಟರ್ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ರೆಡ್ಡಿ ಮತ್ತು ಶ್ರೀನಿವಾಸ್ ಹೆಸರಿನ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಮರಾವತಿ ದಾರಣ ಘಟನೆಯನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.