Loading video

Video: ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ

Updated on: Apr 25, 2025 | 9:55 AM

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್​ನ ಮೊಂಘಮಾ ಪ್ರದೇಶದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್​ ಮನೆ ನಾಶವಾಗಿದೆ. ಆ ಮನೆ ಆಸಿಫ್ ಶೇಖ್ ಎಂಬ ಭಯೋತ್ಪಾದಕನದ್ದಾಗಿದ್ದು, ಏಪ್ರಿಲ್ 22 ರಂದು ಪಹಲ್ಗಾಮ್​ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕರ ಜೀವವನ್ನು ಬಲಿ ಪಡೆದ ಘಟನೆಯಲ್ಲಿ ಆತನ ಹೆಸರು ಕೂಡ ಕೇಳಿಬಂದಿತ್ತು.

ಪುಲ್ವಾಮಾ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್​ನ ಮೊಂಘಮಾ ಪ್ರದೇಶದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಪಹಲ್ಗಾಮ್ ಶಂಕಿತ ದಾಳಿಕೋರ ಆಸಿಫ್ ಶೇಖ್​ ಮನೆ ನಾಶವಾಗಿದೆ. ಆ ಮನೆ ಆಸಿಫ್ ಶೇಖ್ ಎಂಬ ಭಯೋತ್ಪಾದಕನದ್ದಾಗಿದ್ದು, ಏಪ್ರಿಲ್ 22 ರಂದು ಪಹಲ್ಗಾಮ್​ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕರ ಜೀವವನ್ನು ಬಲಿ ಪಡೆದ ಘಟನೆಯಲ್ಲಿ ಆತನ ಹೆಸರು ಕೂಡ ಕೇಳಿಬಂದಿತ್ತು.

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಮನೆಗಳು ನೆಲಸಮವಾಗಿದೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಆವರಣದೊಳಗೆ ಕೆಲವು ಅನುಮಾನಾಸ್ಪದ ವಸ್ತುಗಳು ಕಂಡುಬಂದವು. ಸನ್ನಿಹಿತ ಅಪಾಯವನ್ನು ಗ್ರಹಿಸಿದ ಸಿಬ್ಬಂದಿ, ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಸ್ಥಳದಿಂದ ಹಿಂದೆ ಸರಿದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಭಾರಿ ಸ್ಫೋಟ ಸಂಭವಿಸಿ ಮನೆ ಸಂಪೂರ್ಣವಾಗಿ ಹಾನಿಗೊಳಗಾಯಿತು. ಸ್ಫೋಟದ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 25, 2025 09:45 AM