ಬೆಂಗಳೂರು: ವೋಟು ಹಾಕಿ ಬಂದವರಿಗೆ ದೋಸೆ ಫ್ರೀ, ತಿಂಡಿ ಫ್ರೀ, ಊಟ ಫ್ರೀ ಅಂತ ತಮ್ಮ ಹೋಟೆಲ್ ಗಳ (hotel) ಮುಂದೆ ಬೋರ್ಡ್ ಬ್ಯಾನರ್ ಗಳನ್ನು ತೂಗು ಹಾಕಿದ್ದ ಮಾಲೀಕರಿಗೆ ಆಘಾತ ಎದುರಾಗಿದೆ. ಹೋಟೆಲ್ ನವರ್ಯಾರೂ ಉಚಿತವಾಗಿ ಏನನ್ನೂ ನೀಡುವಂತಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಸಹಾಯಕ ಚುನಾವಣಾ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಎಚ್ಚರಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ 20-04-2023 ರಿಂದ 13-05-2023 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿರುವ ಅವರು ಈ ಅವಧಿಯಲ್ಲಿ ಹೋಟೆಲ್ ಮಾಲೀಕರು ಗ್ರಾಹಕರಿಗೆ ಉಚಿತವಾಗಿ ಊಟ-ತಿಂಡಿ, ಕಾಫಿ ನೀಡಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ. ಸಂಹಿತೆಯ ಉಲ್ಲಂಘನೆಯಾದಲ್ಲಿ ಹೋಟೆಲ್ ಮಾಲೀಕರನ್ನೇ ಹೊಣೆಗಾರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಎಲ್ಲ ಹೋಟೆಲ್ ಗಳಿಗೆ ಜಾರಿ ಮಾಡಿರುವ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ