Karnataka Assembly Polls: ಸಿದ್ದರಾಮಯ್ಯ, ಶಿವಕುಮಾರ್ ಜೊತೆಯಾಗಿ ಮೈಸೂರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು
ಎಲ್ಲ ಪಕ್ಷಗಳ ನಾಯಕರು ಗುಡಿಗುಂಡಾರಗಳ ಮೊರೆಹೊಕ್ಕಿರುವ ಹಾಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಹ ಮೈಸೂರಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ.
ಮೈಸೂರು: ಚುನಾವಣೆ ಎಂಬ ಮಾಯೆಯೇ ಹಾಗೆ ಮಾರಾಯ್ರೇ, ನಾಸ್ತಿಕರನ್ನೂ ಅಸ್ತಿಕರಾಗಿಸುತ್ತದೆ. ಡಿಕೆ ಶಿವಕುಮಾರ್ ಬಿಡಿ (DK Shivakumar), ಅವರು ಧೈವಭಕ್ತರು ಅಂತ ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ (Siddaramaiah) ಕೂಡ ತಾನು ದೈವಭಕ್ತ ಅಂತ ಹೇಳಿಕೊಳ್ಳುತ್ತಾರೆ, ಅದರೆ ಅವರು ದೇವಸ್ಥಾನಗಳಿಗೆ ಹೋಗೋದು ಕಮ್ಮಿ ಅಂತಲೇ ಹೇಳಬೇಕು. ಅವರು ನಾಸ್ತಿಕರು ಅಂತೇನೂ ನಾವು ಹೇಳುತ್ತಿಲ್ಲ. ಮೌಢ್ಯಗಳನ್ನು (superstition) ದ್ವೇಷಿಸುವ ವಿಚಾರವಾದಿ ಅಂತ ಅವರೇ ಹೇಳಿಕೊಂಡಿದ್ದುಂಟು. ನಾಳೆ ರಾಜ್ಯದಲ್ಲಿ ಮತದಾನ ನಡೆಯಲಿದೆ. ಮತದಾರ ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದ್ದಾನೆ. ಮತದಾರ ನಮ್ಮ ಪರ ವಾಲಲಿ ಅಂತ ಎಲ್ಲ ಪಕ್ಷಗಳ ನಾಯಕರು ಗುಡಿಗುಂಡಾರಗಳ ಮೊರೆಹೊಕ್ಕಿರುವ ಹಾಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಹ ಮೈಸೂರಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಅವರಿಬ್ಬರ ಜೊತೆ ಮಾಜಿ ಸಚಿವ ಕೆಜೆ ಜಾರ್ಜ್ ಸಹ ಅದೇ ಕಾರಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ