Updated on:May 08, 2023 | 5:42 PM
ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ನಟಿ ನಿಶ್ವಿಕಾ ನಾಯ್ಡು ಭೇಟಿ ನೀಡಿ ಆರ್ಶೀವಾದ ಪಡೆದುಕೊಂಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ನಿಶ್ವಿಕಾ ನಾಯ್ಡು ಚಾಮುಂಡೇಶ್ವರಿ ಅಮ್ಮನವರ ಆರ್ಶೀವಾದ ಪಡೆದುಕೊಂಡಿರುವ ಪೋಟೋಗಳು ಎಲ್ಲೆಡೆ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡರು.
ಸಿದ್ದರಾಮಯ್ಯ ಅವರು ನನಗೆ ಅಪ್ಪಾಜಿ ಇದ್ದಂತೆ, ಆದ್ದರಿಂದ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಹೇಳಿಕೊಂಡಿದ್ದರು. ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.
ಇದೀಗಾ ಮತದಾನಕ್ಕೆ ಎರಡು ಮೂರು ದಿನ ಬಾಕಿ ಇರುವಾಗ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಸ್ವತಹ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನಟಿ. ವರುಣ ಕ್ಷೇತ್ರದ ಜನರೇ, ನಿಮ್ಮ ಪ್ರೀತಿ ಮತ್ತು ದಯೆಗೆ ನಾನು ಆಭಾರಿಯಾಗಿದ್ದೇನೆ ಎಂದು ಪ್ರಚಾರದ ಸಮಯದಲ್ಲಿ ಪೋಸ್ಟ್ ಮಾಡಿದ್ದಾರೆ.
Published On - 5:38 pm, Mon, 8 May 23