ಬೆಂಗಳೂರಿನಲ್ಲಿ ಮೋದಿ ರೋಡ್ ​ಶೋ ತಯಾರಿ ಬಗ್ಗೆ ಎಂ.ಕೃಷ್ಣಪ್ಪ ಹೇಳಿದ್ದೇನು?

|

Updated on: May 06, 2023 | 9:14 AM

ಮೋದಿ ರೋಡ್​ಶೋ ಹಿನ್ನಲೆ ‘ಅವರ ದೊಡ್ಡ ಹೋರ್ಡಿಂಗ್ಸ್ ಮತ್ತು ಬ್ಯಾರಿಕೇಡ್​ಗಳನ್ನ ಹಾಕಲಾಗಿದೆ. ಮೋದಿ ನಮ್ಮ ಕ್ಷೇತ್ರದಿಂದ ರೋಡ್​ ಶೋ ನಡೆಸಲಿದ್ದು, ಪುರಸಭೆ, ನಗರಸಭೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಖುಷಿಯಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಎಂ.ಕೃಷ್ಣಪ್ಪ ಹೇಳಿದರು.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಹಿನ್ನಲೆ  ಇಂದು(ಮೇ.6) ಪ್ರಧಾನಿ ನರೇಂದ್ರ ಮೋದಿ(Narendra Modi) ರೋಡ್ ಶೋ ಮಾಡಲಿದ್ದು, RBI ಲೇಔಟ್​ನ ಸೋಮೇಶ್ವರ ಸಭಾ ಭವನದಿಂದ ರೋಡ್ ಶೋ ಪ್ರಾರಂಭವಾಗಲಿದೆ. ಈಗಾಗಲೇ ಮೋದಿ ಸ್ವಾಗತಿಸೋಕೆ ಸಕಲ ತಯಾರಿಗಳು ನಡೀತಿದ್ದು, ರೋಡ್ ಶೋ ತಯಾರಿಯನ್ನ ವೀಕ್ಷಣೆ ಮಾಡಿದ ಬೆಂಗಳೂರು ದಕ್ಷಿಣ ಅಭ್ಯರ್ಥಿ ಎಮ್ ಕೃಷ್ಣಪ್ಪ ಮಾತನಾಡಿ ‘ಮೋದಿ ಅವರ ದೊಡ್ಡ ಹೋರ್ಡಿಂಗ್ಸ್ ಮತ್ತು ಬ್ಯಾರಿಕೇಡ್​ಗಳನ್ನ ಹಾಕಲಾಗಿದೆ. ಇನ್ನು ಮೋದಿ ನಮ್ಮ ಕ್ಷೇತ್ರದಿಂದ ರೋಡ್​ ಶೋ ನಡೆಸಲಿರುವ ಹಿನ್ನಲೆ ಪುರಸಭೆ, ನಗರಸಭೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಖುಷಿಯಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಇನ್ನು ಮೋದಿ ಬರುವುದರಿಂದ ಮತ್ತಷ್ಟು ಮತಗಳು ನಮ್ಮ ಪರ ಬರಲಿವೆ ಎಂದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ