ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಅದರಿಂದ ಸಿಗುವ ಫಲವೇನು?
ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸುವುದರಿಂದ ಶುಭ ಫಲಗಳು ಸಂಭವಿಸುತ್ತವೆ. ಆದರೆ ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ? ಇದು ಯಾವ ರೀತಿಯ ಫಲಗಳನ್ನು ನೀಡುತ್ತದೆ ಎಂಬುದನ್ನು ಬಸವರಾಜ ಗುರೂಜಿ ವಿವರಿಸಿದ್ದಾರೆ.
ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಮಾಡಿ ತೀರ್ಥ ಪ್ರಸಾದ ಸೇವಿಸಿ ಆರತಿ ತಟ್ಟೆಗೆ ಚಿಲ್ಲರೆ ಹಣ ಹಾಕುತ್ತೇವೆ. ಅದೇ ರೀತಿ ದೇವಸ್ಥಾನದಲ್ಲಿ ಇಡಲಾದ ಹುಂಡಿಗೂ ಭಕ್ತರು ಹಣ ಹಾಕುತ್ತಾರೆ. ತಮ್ಮ ತಮ್ಮ ಕೈಯಲ್ಲಿ ಆಗುವಷ್ಟು ಹಣವನ್ನು ಹುಂಡಿಗೆ ಹಾಕುವುದುಂಟು. ಆದರೆ ದೇವರ ಹುಂಡಿಗೆ ಎಷ್ಟು ಹಣ ಹಾಕುವುದರಿಂದ ಧರ್ಮದ ಫಲ ಸಿಗುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ದೇವರ ಹುಂಡಿಗೆ ಹಾಕುವ ಹಣವು ದೇವಸ್ಥಾನದ ಅಭಿವೃದ್ಧಿ ಕಾರ್ಯ, ಅನ್ನ ಸಂತರ್ಪಣೆ, ಸಿಬ್ಬಂದಿ ಸಂಬಳಕ್ಕೆ ಬಳಸಿಕೊಳ್ಳಲಾಗುತ್ತೆ. ಸಿರಿವಂತರು ತಮ್ಮಲ್ಲಿ ಸಾಕಷ್ಟು ಹಣ ಇದೆ ಎಂದು ಸಾವಿರಾರು ರೂ ಹಣವನ್ನು ಹುಂಡಿಗೆ ಹಾಕುವುದುಂಟು. ಆದರೆ ಶಾಸ್ತ್ರಗಳಲ್ಲಿ ಇಷ್ಟೇ ಹಣವನ್ನು ಹಾಕಬೇಕು. ಅದರಿಂದ ಏನೆಲ್ಲ ಫಲಗಳಿರುತ್ತವೆ ಎಂಬ ಬಗ್ಗೆ ವಿವರಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ