ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್
ಸಂಜೆ ಹೊತ್ತಿಗೆ ಕಾಫಿ ಅಥವಾ ಟೀ ಜೊತೆಗೆ ಬಿಸಿ ಬಿಸಿ ಕಟ್ಲೇಟ್ ಸವಿದರೆ ಮತ್ತೆ ಮತ್ತೆ ಮಾಡಬೇಕು ಅಂತ ಅನಿಸುತ್ತೆ. ಈ ವೆಜ್ ಕಟ್ಲೆಟ್ನ ಮಾಡಲು ಬೇಕಾಗುವ ಸಾಮಾಗ್ರಿಗಳು ವಿಡಿಯೋದಲ್ಲಿ ಇದೆ. ವಿಡಿಯೋವನ್ನು ಗಮನಿಸಿ ನಿಮ್ಮ ಮನೆಯಲ್ಲೂ ವೆಜ್ ಕಟ್ಲೆಟ್ ಮಾಡಿ.
ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ಹೀಗಾಗಿ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಲಾಕ್ಡೌನ್ನಿಂದ ಬಹುತೇಕ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಮನೆಯಲ್ಲಿ ಕೂತು ಕೂತು ಸಾಕಾಗಿದೆ. ಹೊರಗೆ ಹೋದರೆ ಕೊರನಾ ಭಯ. ಮನೆಯಲ್ಲಿ ಎಷ್ಟು ಅಂತಾ ಇರೋದಿಕ್ಕೆ ಆಗುತ್ತೆ ಅಂತ ನೀವು ಯೋಚಿಸುತ್ತಿದ್ದೀರಾ ಅಲ್ವಾ? ಮಳೆಗಾಲ ಹತ್ತಿರ ಬರುತ್ತಿದೆ. ಮಳೆಯಲ್ಲಿ ಏನಾದರೂ ಬಿಸಿ ಬಿಸಿ ತಿಂಡಿ ತಿನ್ನಬೇಕು ಅಂತ ಅನಿಸುತ್ತೆ. ಬೋಂಡ, ಬಜ್ಜಿ ಅಂತೆಲ್ಲ ಮಾಡುತ್ತೀರಾ. ಇದರ ಜೊತೆಗೆ ಬಿಸಿ ಬಿಸಿ ವೆಜ್ ಕಟ್ಲೆಟ್ ಕೂಡಾ ಮಾಡಿ ಸವಿಯಿರಿ.
ಲಾಕ್ಡೌನ್ನಿಂದ ದೂರದ ಊರುಗಳಲಿದ್ದ ಮನೆ ಸದಸ್ಯರೆಲ್ಲ ಊರಿಗೆ ಬಂದಿದ್ದಾರೆ. ಮನೆಗಳಲ್ಲಿ ಜನ ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ತಿಂಡಿ ಮಾಡುವುದಕ್ಕೆ ಒಬ್ಬೊಬ್ಬರೆ ಕಷ್ಟಪಡಬೇಕೆಂಬ ತಲೆ ನೋವಿಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಎಂದು ಹೇಳುವಂತೆ ಒಬ್ಬೊಬ್ಬರು ಒಂದೊಂದು ಕೆಲಸ ಮಾಡಿದರೆ ಕೇವಲ ಅರ್ಧ ಗಂಟೆಯಲ್ಲಿ ವೆಜ್ ಕಟ್ಲೆಟ್ನ ಮಾಡಿ ಸವಿಯಬಹುದು. ಸಂಜೆ ಹೊತ್ತಿಗೆ ಕಾಫಿ ಅಥವಾ ಟೀ ಜೊತೆಗೆ ಬಿಸಿ ಬಿಸಿ ಕಟ್ಲೇಟ್ ಸವಿದರೆ ಮತ್ತೆ ಮತ್ತೆ ಮಾಡಬೇಕು ಅಂತ ಅನಿಸುತ್ತೆ. ಈ ವೆಜ್ ಕಟ್ಲೆಟ್ನ ಮಾಡಲು ಬೇಕಾಗುವ ಸಾಮಾಗ್ರಿಗಳು ವಿಡಿಯೋದಲ್ಲಿ ಇದೆ. ವಿಡಿಯೋವನ್ನು ಗಮನಿಸಿ ನಿಮ್ಮ ಮನೆಯಲ್ಲೂ ವೆಜ್ ಕಟ್ಲೆಟ್ ಮಾಡಿ.
ಇದನ್ನೂ ನೋಡಿ
ಕೊಡಗು ಸ್ಟೈಲ್ನಲ್ಲಿ ಮಾವಿನ ಹಣ್ಣಿನ ಸಾರು ಮಾಡೋ ವಿಧಾನ ಇಲ್ಲಿದೆ ನೋಡಿ..
(How to Make Veg Cutlet home short time at home)