ಕೊಡಗು ಸ್ಟೈಲ್ನಲ್ಲಿ ಮಾವಿನ ಹಣ್ಣಿನ ಸಾರು ಮಾಡೋ ವಿಧಾನ ಇಲ್ಲಿದೆ ನೋಡಿ..
ನಾಲ್ಕೈದು ಕಾಡು ಮಾವಿನಹಣ್ಣುಗಳು, ಬೆಲ್ಲ, ಜೀರಿಗೆ ಪುಡಿ, ಉಪ್ಪು, ಗಾಂಧಾರಿ ಮೆಣಸು, ಈರುಳ್ಳಿ, ಉಪ್ಪು, ಬೆಳ್ಳುಳ್ಳಿ, ಸಾಸಿವೆ, ಕಪ್ಪು ಮಸಾಲಾ ಪೌಡರ್, ಅರಿಶಿಣ ಮೆಣಸಿನ ಪುಡಿ, ಕರಿಬೇವಿನ ಸೊಪ್ಪು, ಎಣ್ಣೆ ಈ ಸಾರಿಗೆ ಬೇಕಾಗುವ ಸಾಮಗ್ರಿಗಳಾಗಿವೆ..
ಮಾವು..ಸಣ್ಣ ಮಿಡಿಯಿಂದ ಹಿಡಿದು ಹಣ್ಣಿನವರೆಗೆ ಬಹೂಪಯೋಗಿ. ಮಾವಿನ ಮಿಡಿಕಾಯಿಗಳನ್ನು ಉಪ್ಪು ನೀರಿಗೆ ಹಾಕಿ ಅದರ ಉಪ್ಪಿನಕಾಯಿ ಮಾಡೋದು ಗೊತ್ತು. ಹಾಗೇ ಹಣ್ಣಿನ ಪಾಯಸವೂ ಫೇಮಸ್. ಬರೀ ಹಣ್ಣನ್ನೂ ಹಾಗೇ ತಿನ್ನಬಹುದು. ಮಾವು ಪ್ರಿಯರಂತೂ ಅದೆಷ್ಟೋ ರೆಸಿಪಿಗಳನ್ನು ತಯಾರಿಸುತ್ತಾರೆ. ಇದೀಗ ಕೊಡಗಿನ ಡಿಂಪಲ್ ನಾಚಪ್ಪ ಅವರು ಮಾವಿನ ಹಣ್ಣಿನ ಸಾರು ಮಾಡುವ ವಿಧಾನವನ್ನು ಇಲ್ಲಿ ತೋರಿಸಿದ್ದಾರೆ ನೋಡಿ.
ಈ ಮಾವಿನ ಹಣ್ಣಿನ ಸಾರು ಮಾಡಲು ಬೇಕಾಗುವ ವಸ್ತುಗಳು ಹೀಗಿವೆ: ನಾಲ್ಕೈದು ಕಾಡು ಮಾವಿನಹಣ್ಣುಗಳು, ಬೆಲ್ಲ, ಜೀರಿಗೆ ಪುಡಿ, ಉಪ್ಪು, ಗಾಂಧಾರಿ ಮೆಣಸು, ಈರುಳ್ಳಿ, ಉಪ್ಪು, ಬೆಳ್ಳುಳ್ಳಿ, ಸಾಸಿವೆ, ಕಪ್ಪು ಮಸಾಲಾ ಪೌಡರ್, ಅರಿಶಿಣ ಮೆಣಸಿನ ಪುಡಿ, ಕರಿಬೇವಿನ ಸೊಪ್ಪು, ಎಣ್ಣೆ ಬೇಕಾಗುತ್ತದೆ. ಇವಿಷ್ಟೂ ಸಾಮಗ್ರಿಗಳನ್ನು ಮೊದಲು ಒಂದು ಬದಿಗೆ ತೆಗೆದಿಟ್ಟುಕೊಳ್ಳಬೇಕು. ನಂತರ ಕಾಡು ಮಾವಿನಹಣ್ಣಿನ ಸಿಪ್ಪೆಯನ್ನು ತೆಗೆದು, ಅದಕ್ಕೆ ಉಪ್ಪು ಹಾಕಿಟ್ಟುಕೊಳ್ಳಬೇಕು. ಹಾಗೇ, ಅದರ ಮೇಲೆ ಮೆಣಸಿನಪುಡಿ, ಜೀರಿಗೆ ಪುಡಿಯನ್ನೂ ಸರಿಯಾಗಿ ಸಿಂಪಡಿಸಬೇಕು. ನಂತರ ಚೆನ್ನಾಗಿ ಕಲಸಬೇಕು..ಬಳಿಕ ಏನು ಮಾಡಬೇಕು ಎಂಬುದನ್ನು ಈ ಮೇಲಿನ ವಿಡಿಯೋದಲ್ಲಿ ನೋಡಿ..
ಇದನ್ನೂ ಓದಿ: ಅರ್ಹತೆ ಇಲ್ಲದವರೆಲ್ಲ ಇದ್ದ ಸಭೆಯಲ್ಲಿ ನಾನ್ಯಾಕೆ ಕುಳಿತುಕೊಳ್ಳಲಿ?..ಈಗ ನನ್ನ ಗೌರವಕ್ಕೆ ಧಕ್ಕೆಯಾಗಿದೆ: ಮಮತಾ ಬ್ಯಾನರ್ಜಿ
(How to Make Mango Sambar recipe Watch this video)