ಮಂಗಳೂರಿನಲ್ಲಿ ಬಂಗಾರ ಕದ್ದ ಮಿಕಗಳು ಲಾಕ್; ಬೆಳಗಾವಿಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್​ಗೆ ಟ್ವಿಸ್ಟ್

ಸಾಧು ಶ್ರೀನಾಥ್​
|

Updated on: May 29, 2021 | 5:29 PM

ಅದೊಂದು ಚಿನ್ನದ ವಿಚಾರ.. ಹೇಳಿದ್ದ ಜಾಗಕ್ಕೆ ಅಲ್ಲಿ ಗೋಲ್ಡ್​ ತಲುಪಿರಲಿಲ್ಲ.. ಇದ್ರಿಂದಾಗಿ, ಆ ಕೇಸ್​ಗೆ ರೌಡಿಗಳು ಎಂಟ್ರಿ ಕೊಟ್ಟಿದ್ರು.. ವ್ಯಕ್ತಿಯ ಕಥೆಯನ್ನೇ ಮುಗಿಸಲು ಹೋಗಿದ್ರು.. ಆದ್ರೀಗ, ಎಲ್ರೂ ಲಾಕ್ ಆಗಿದ್ದಾರೆ.. ಮತ್ತೊಂದ್ಕಡೆ, ಖಾಕಿ ಗೋಲ್ಡ್​ ಕೇಸ್​​​​​​​​​​ನಲ್ಲಿ ಹತ್ತಾರು ಅನುಮಾನ ಸುಳಿಯುತ್ತಿದೆ.

ಮಂಗಳೂರಿನಲ್ಲಿ ಬಂಗಾರ ಕದ್ದ ಮಿಕಗಳು ಲಾಕ್; ಬೆಳಗಾವಿಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್​ಗೆ ಟ್ವಿಸ್ಟ್:
ಅದೊಂದು ಚಿನ್ನದ ವಿಚಾರ.. ಹೇಳಿದ್ದ ಜಾಗಕ್ಕೆ ಅಲ್ಲಿ ಗೋಲ್ಡ್​ ತಲುಪಿರಲಿಲ್ಲ.. ಇದ್ರಿಂದಾಗಿ, ಆ ಕೇಸ್​ಗೆ ರೌಡಿಗಳು ಎಂಟ್ರಿ ಕೊಟ್ಟಿದ್ರು.. ವ್ಯಕ್ತಿಯ ಕಥೆಯನ್ನೇ ಮುಗಿಸಲು ಹೋಗಿದ್ರು.. ಆದ್ರೀಗ, ಎಲ್ರೂ ಲಾಕ್ ಆಗಿದ್ದಾರೆ.. ಮತ್ತೊಂದ್ಕಡೆ, ಖಾಕಿ ಗೋಲ್ಡ್​ ಕೇಸ್​​​​​​​​​​ನಲ್ಲಿ ಹತ್ತಾರು ಅನುಮಾನ ಸುಳಿಯುತ್ತಿದೆ.

ರಾಜ್ಯವನ್ನೆ ಬೆಚ್ಚಿ ಬಿಳಿಸಿರುವ ಬೆಳಗಾವಿ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕುಂದಾನಗರಿಯಿಂದ ಕದ್ದ 4.9 ಕೆಜಿ ಚಿನ್ನ ವಾಣಿಜ್ಯ ನಗರಿಯಲ್ಲಿ ಮಾರಾಟವಾಗಿದೆ ಎನ್ನುವ ಮಾಹಿತಿ ಸದ್ಯ ಸಿಐಡಿ ಅಧಿಕಾರಿಗಳಿಗೆ ಲಭಿಸಿದೆ. ಹೀಗಾಗಿ ಪ್ರಕರಣ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮಂಗಳೂರು ಮೂಲದ ತಿಲಕ್ ಪೂಜಾರಿ ಎನ್ನುವವರು ತಮ್ಮ ಸ್ನೇಹಿತರ ಮೂಲಕ ಎರ್ಟಿಗಾ ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು. ಆದರೆ ಜನವರಿ ತಿಂಗಳಲ್ಲಿ ಬೆಳಗಾವಿಯ ಯಮಕನಮರಡಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದರು. ಅದು ಪಕ್ಕಾ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಕಿರಣ್ ವೀರನಗೌಡ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿ ಕಾರು ಹಿಡಿಸಿದ್ದ. ಬಳಿಕ ಕಾರಿನಲ್ಲಿದ್ದ 4.9 ಕೆಜಿ ಚಿನ್ನವನ್ನು ಎಸ್ಕೇಪ್ ಮಾಡಿದ್ದರು.

(Belagavi gold smuggling case big twist accused arrested in Mangalore)