ಲಸಿಕೆ ಮಾರಾಟದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಕಮಿಷನ್ ಆರೋಪ..?
ಕರ್ನಾಟಕದಲ್ಲಿ ಕೊರೊನಾ ಹೆಮ್ಮಾರಿಯ ರುದ್ರನರ್ತನ ನಡೆಯುತ್ತಿರುವಾಗಲೇ ಈಗ ಭ್ರಷ್ಟಾಚಾರದ ಆರೋಪವೂ ಕೇಳಿ ಬಂದಿದೆ. ಬಸವನಗುಡಿ ಶಾಸಕ ರವಿಸುಬ್ರಮಣ್ಯ ವಿರುದ್ಧ ಸರ್ಕಾರದಿಂದ ನೀಡುವ ಫ್ರೀ ಲಸಿಕೆಯ ಮಾರಾಟದಲ್ಲಿ ಕಮಿಶನ್ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ..

ಕೊವಿಡ್ ಲಸಿಕೆಗೆ ಕಮಿಷನ್ ಪಡೆಯುವ ವಿಚಾರ ರವಿ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಇದರ ಹಿಂದೆ ಕಾಂಗ್ರೆಸ್ ಕೈವಾಡ ಇರುವ ಅನುಮಾನವಿದೆ. ₹1,300ಕ್ಕೆ ಸಿಗುತ್ತಿದ್ದ ಲಸಿಕೆ ₹900ಕ್ಕೆ ಸಿಗುವಂತೆ ಮಾಡಿದ್ದೆವು. ಇದನ್ನು ಸಹಿಸಲು ಆಗದೆ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುವವರಿಗೆ ಬೇರೆ ಯಾವುದೇ ಕೆಲಸವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ 900 ರೂಪಾಯಿ ಪಡೆಯುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
(Basavanagudi MLA Ravi Subramanya has been accused of getting a commission in Vaccine sale)