ಕೋಲಾರ ಸ್ಪೆಷಲ್ ಬಿರಿಯಾನಿ; ನಾನ್​ ವೆಜ್​ ಪ್ರಿಯರು ಇಂದೇ ಮಾಡಿ ಸವಿಯಿರಿ

Edited By:

Updated on: Aug 11, 2021 | 9:23 AM

ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ.

ನಾನ್​ ವೆಜ್​ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್​ ಬಿರಿಯಾನಿ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.

ಕೋಲಾರ ಸ್ಪೆಷಲ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಚಿಕನ್, ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು, ಮೊಸರು, ಅಕ್ಕಿ, ಹಸಿ ಮೆಣಸಿನಕಾಯಿ, ಕರಿಬೇವು, ಏಲಕ್ಕಿ, ಚಕ್ಕೆ, ಲವಂಗ ಪಲಾವ್ ಎಲೆ, ಕಸ್ತೂರಿ ಮೇಥಿ, ನಕ್ಷತ್ರ ಮೊಗ್ಗು, ನಿಂಬೆ ಹಣ್ಣು, ಟೇಸ್ಟಿಂಗ್ ಪೌಡರ್, ಮೊಸರು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ- ಶುಂಠಿ ಪೇಸ್ಟ್, ತುಪ್ಪ, ಟೊಮೆಟೋ.

ಕೋಲಾರ ಸ್ಪೆಷಲ್ ಬಿರಿಯಾನಿ ಮಾಡುವ ವಿಧಾನ
ಮೊದಲು ಒಂದು ಬೌಲ್​ಗೆ ಚಿಕನ್, ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು, ಮೊಸರು ಹಾಕಿ ಕಲಸಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ತುಪ್ಪ, ಎಣ್ಣೆ, ಕರಿಬೇವು, ಏಲಕ್ಕಿ, ಚಕ್ಕೆ, ಲವಂಗ ಪಲಾವ್ ಎಲೆ, ಕಸ್ತೂರಿ ಮೇಥಿ, ನಕ್ಷತ್ರ ಮೊಗ್ಗು, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ, ಟೊಮೆಟೋ, ಚಿಕನ್, ಉಪ್ಪು ಹಾಕಿ ಬೇಯಿಸಿ. ಬಳಿಕ ಕುಕ್ಕರ್ ಇಟ್ಟು, ಎಣ್ಣೆ, ಚಕ್ಕೆ, ಲವಂಗ, ನೀರು ಹಾಕಿ, ನೆನೆಸಿದ ಅಕ್ಕಿ, ಉಪ್ಪು ಹಾಕಿ ಬೇಯಿಸಿ. ಬಳಿಕ ಚಿಕನ್​ಗೆ ಅನ್ನ ಹಾಕಿ ಕಲಸಿ. ಬಳಿಕ ಒಂದು ಪಾತ್ರೆಗೆ ಹಾಕಿ ದಮ್​ ಕಟ್ಟಿ, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣಿನ ರಸ ಹಾಕಿದರೆ ಬಿರಿಯಾನಿ ಸವಿಯಲು ಸಿದ್ಧ.

ಇದನ್ನೂ ಓದಿ:

ಮಶ್ರೂಮ್​ ಬಿರಿಯಾನಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಶಾವಿಗೆಯಲ್ಲೂ ಚಿಕನ್ ಬಿರಿಯಾನಿ ಮಾಡಬಹುದು; ಸುಲಭವಾಗಿ ಮನೆಯಲ್ಲಿ ತಯಾರಿಸಿ

 

Loading...
Unable to load recommendations.
Follow Us
TV9 Web

TV9 Kannada

Read More