ಪಾವ್ ಬಾಜಿ; 15 ನಿಮಿಷದಲ್ಲಿ ನಿಮಗಿಷ್ಟವಾದ ಚಾಟ್ಸ್ ಮನೆಯಲ್ಲೇ ಮಾಡಿ ಸವಿಯಿರಿ
ಲಾಕ್ಡೌನ್ ಆಗಿರುವುದರಿಂದ ಹೊರಗಿನ ತಿಂಡಿಯನ್ನು ತಿನ್ನುವುದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿಯೇ ಸರಳ ವಿಧಾನದ ಜತೆಗೆ ಪಾವ್ ಬಾಜಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಅನೇಕ ಕಡೆಗಳಲ್ಲಿ ಚಾಟ್ಸ್ ತಿನ್ನಬೇಕು, ವಿಭಿನ್ನವಾದ ಅಡುಗೆಯನ್ನು ಸವಿಯಬೇಕು ಎನ್ನುವುದು ಕೆಲವರ ಹವ್ಯಾಸವಾಗಿರುತ್ತದೆ. ಹೀಗಾಗಿ ಆಫೀಸ್ ಮುಗಿದ ಮೇಲೆ, ಸ್ನೇಹಿತರ ಜತೆ ಹೊರಗಡೆ ಹೋದಾಗ, ಕಾಲೇಜು ಮುಗಿದ ಮೇಲೆ ಸಂಜೆ ಚಾಟ್ಸ್ ತಿನ್ನಲು ಹೋಗುತ್ತಾರೆ. ಇಂತಹ ಚಾಟ್ಸ್ಗಳಲ್ಲಿ ಪಾವ್ ಬಾಜಿ ಕೂಡ ಒಂದು. ಈಗ ಲಾಕ್ಡೌನ್ ಆಗಿರುವುದರಿಂದ ಹೊರಗಿನ ತಿಂಡಿಯನ್ನು ತಿನ್ನುವುದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿಯೇ ಸರಳ ವಿಧಾನದ ಜತೆಗೆ ಪಾವ್ ಬಾಜಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಪಾವ್ ಬಾಜಿ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ, ಆಲೂಗಡ್ಡೆ, ಬಟಾಣಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪನ್ನಿರ್, ತುಪ್ಪ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಮತ್ತು ಮೆಣಸಿನ ಪುಡಿ.
ಮೊದಲು ಓಲೆ ಹಚ್ಚಿ ಬಾಣಲೆಗೆ ಅಡುಗೆ ಎಣ್ಣೆ ಮತ್ತು ಸ್ವಲ್ಪ ತುಪ್ಪ ಹಾಕಬೇಕು. ಅದು ಕಾದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು, ಬಳಿಕ ಕ್ಯಾಪ್ಸಿಂ ಹಾಕಬೇಕು, ಆದಾದ ಮೇಲೆ ಟೊಮೆಟೊ ಹಾಕಬೇಕು, ಬಳಿಕ ಬೇಯಿಸಿದ ಬಟಾಣಿ, ಪನ್ನಿರ್ ಮತ್ತು ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು, ನಂತರ ಸ್ವಲ್ಪ ನೀರು ಸೇರಿಸಿ ಕಲಸಿಕೊಳ್ಳಬೇಕು, ಗರಂ ಮಸಾಲಾ, ಮೆಣಸಿನ ಪುಡಿ, ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ತವಾದ ಮೇಲೆ ತುಪ್ಪ ಹಾಕಿ ಪಾವ್ ಅನ್ನು ರೋಸ್ಟ್ ಮಾಡಿಕೊಳ್ಳಬೇಕು. ಈಗ ಮನೆಯಲ್ಲೇ ಪಾವ್ ಬಾಜಿ ಸವಿಯಲು ಸಿದ್ಧ.
ಇದನ್ನೂ ಓದಿ:
ಮಾವಿನ ಹಣ್ಣಿನ ಓಟ್ಸ್ ಲಡ್ಡು; ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ
ದಾವಣಗೆರೆ ಸ್ಪೆಷಲ್ ನರ್ಗಿಸ್ ಮಂಡಕ್ಕಿ; ಬಿಸಿ ಬಿಸಿ ಟೀ ಜೊತೆಗೆ ಮಾಡಿ ಸವಿಯಿರಿ