ಶಾವಿಗೆಯಲ್ಲೂ ಚಿಕನ್ ಬಿರಿಯಾನಿ ಮಾಡಬಹುದು; ಸುಲಭವಾಗಿ ಮನೆಯಲ್ಲಿ ತಯಾರಿಸಿ
ಶಾವಿಗೆ ಪಾಯಸ, ಶಾವಿಗೆ ಉಪ್ಪಿಟ್ಟು ಮಾಡಿ ಗೊತ್ತಿರುತ್ತದೆ ಆದರೆ ಶಾವಿಗೆ ಬಿರಿಯಾನಿ ಇವುಗಳಿಗಿಂತ ಸ್ವಲ್ಪ ಭಿನ್ನ. ಅದರಲ್ಲೂ ಇದು ಚಿಕನ್ ಶಾವಿಗೆ ಬಿರಿಯಾನಿ.
ಬಿರಿಯಾನಿ ಎಂದರೆ ಕೇವಲ ಅಕ್ಕಿಯಿಂದ ಮಾಡುವುದು ಎಂದು ತಿಳಿದವರಿಗಾಗಿ ಒಂದು ವಿಶೇಷ ಶೈಲಿಯಾ ಅಡುಗೆಯನ್ನು ಇಂದು ನಾವು ತಿಳಿದುಕೊಳ್ಳೋಣ. ಲಾಕ್ಡೌನ್ ಕಾಲದಲ್ಲಿ ಮನೆಯಲ್ಲಿಯೇ ಇರುವ ಹಲವರು ಈ ಅಡುಗೆಯನ್ನು ಒಮ್ಮೆ ಮಾಡಿ ನೋಡಬಹುದು. ಶಾವಿಗೆ ಪಾಯಸ, ಶಾವಿಗೆ ಉಪ್ಪಿಟ್ಟು ಮಾಡಿ ಗೊತ್ತಿರುತ್ತದೆ ಆದರೆ ಶಾವಿಗೆ ಬಿರಿಯಾನಿ ಇವುಗಳಿಗಿಂತ ಸ್ವಲ್ಪ ಭಿನ್ನ. ಅದರಲ್ಲೂ ಇದು ಚಿಕನ್ ಶಾವಿಗೆ ಬಿರಿಯಾನಿ.
ಶಾವಿಗೆ ಚಿಕನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಚಿಕನ್, ಶಾವಿಗೆ, ದನಿಯಾ ಪುಡಿ, ಖಾರದ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಏಲಕ್ಕಿ, ಲವಂಗ, ಚಕ್ಕೆ, ಉಪ್ಪು, ಕೊತ್ತಂಬರಿ ಸೊಪ್ಪು, ಟೊಮೆಟೋ, ಪಲಾವ್ ಎಲೆ.
ಶಾವಿಗೆ ಚಿಕನ್ ಬಿರಿಯಾನಿ ಮಾಡುವ ವಿಧಾನ
ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಚಕ್ಕೆ, ಏಲಕ್ಕಿ, ಲವಂಗ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಟೊಮೆಟೋ, ದನಿಯಾ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ, ನಂತರ ಚಿಕನ್ ಹಾಕಿ ಬೇಯಿಸಿಕೊಳ್ಳಬೇಕು. ಬಳಿಕ ಅದಕ್ಕೆ ನೀರು ಹಾಕಿ, ಶಾವಿಗೆ ಹಾಕಬೇಕು. 10 ನಿಮಿಷ ಆದ ಮೇಲೆ ಅದಕ್ಕೆ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಪಲಾವ್ ಎಲೆ ಹಾಕಬೇಕು ಈಗ ರುಚಿಕರವಾದ ಶಾವಿಗೆ ಚಿಕನ್ ಬಿರಿಯಾನಿ ಸವಿಯಲು ಸಿದ್ಧ.
ಇದನ್ನೂ ಓದಿ:
ಚಿಕನ್ ಹರಿಯಾಲಿ ಟಿಕ್ಕ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಮಲೆನಾಡಿನ ಫೋರ್ಕ್ ಫ್ರೈ; ಮಳೆಗಾಲದಲ್ಲಿ ಅಕ್ಕಿ ರೊಟ್ಟಿ ಜತೆ ಮಾಡಿ ಸವಿಯಿರಿ