HP Chromebook: ಎಚ್​ಪಿ ಕ್ರೋಮ್​ಬುಕ್ ಅನ್​ಬಾಕ್ಸಿಂಗ್ – ಗ್ಯಾಜೆಟ್ ರಿವ್ಯೂ | Gadget Review | Unboxing

ಕಿರಣ್​ ಐಜಿ

Updated on: Jun 19, 2023 | 6:25 PM

ದುಬಾರಿ ಬೆಲೆಯ ಲ್ಯಾಪ್​ಟಾಪ್ ಬದಲು, ಬಜೆಟ್ ದರಕ್ಕೆ ಲ್ಯಾಪ್​ಟಾಪ್ ಸಿಕ್ಕಿದರೆ ಪಾಲಕರಿಗೂ ಅನುಕೂಲವಾಗುತ್ತದೆ. ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್ ಕ್ಷೇತ್ರದ ಪ್ರಮುಖ ಸಂಸ್ಥೆ ಎಚ್​ಪಿ, ಕ್ರೋಮ್​ಬುಕ್ ಸರಣಿಯಲ್ಲಿ ಹೊಸ ಮಾದರಿ ಪರಿಚಯಿಸಿದೆ.

ಶಾಲಾ-ಕಾಲೇಜುಗಳು ಆರಂಭವಾಗಿವೆ. ಪ್ರಾಜೆಕ್ಟ್ ವರ್ಕ್, ಹೋಮ್ ವರ್ಕ್ ಎಂದೆಲ್ಲಾ ವಿದ್ಯಾರ್ಥಿಗಳು ಈಗ ಲ್ಯಾಪ್​ಟಾಪ್, ಕಂಪ್ಯೂಟರ್ ಕುರಿತು ಹೆಚ್ಚು ತಲೆಕೆಡಿಸಿಕೊಂಡಿರುವುದು ಸಾಮಾನ್ಯ. ಅದರಲ್ಲೂ ದುಬಾರಿ ಬೆಲೆಯ ಲ್ಯಾಪ್​ಟಾಪ್ ಬದಲು, ಬಜೆಟ್ ದರಕ್ಕೆ ಲ್ಯಾಪ್​ಟಾಪ್ ಸಿಕ್ಕಿದರೆ ಪಾಲಕರಿಗೂ ಅನುಕೂಲವಾಗುತ್ತದೆ. ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್ ಕ್ಷೇತ್ರದ ಪ್ರಮುಖ ಸಂಸ್ಥೆ ಎಚ್​ಪಿ, ಕ್ರೋಮ್​ಬುಕ್ ಸರಣಿಯಲ್ಲಿ ಹೊಸ ಮಾದರಿ ಪರಿಚಯಿಸಿದೆ. ಎಚ್​ಪಿ ಕ್ರೋಮ್​ಬುಕ್ 15.6 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಕ್ರೋಮ್​ಬುಕ್ 15a-na0012TU ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್​ ರಿವ್ಯೂ ವಿಡಿಯೊ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.