ಮರದಡಿ ಸಿಲುಕಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಮಹಿಳೆಯರು; ವಿಡಿಯೋ ವೈರಲ್!

Updated on: Apr 30, 2026 | 12:34 PM

ಬೆಂಗಳೂರಿನಲ್ಲಿ ಸುರಿದ ರಣಮಳೆಯಿಂದ 9 ಸಾವು ಹಾಗೂ ಮರಗಳು ಧರೆಗುರುಳಿವೆ. ಈ ದುರಂತಗಳ ಮಧ್ಯೆ, ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಮರ ಬಿದ್ದು ಸಿಲುಕಿದ ಹಸುವನ್ನು ಇಬ್ಬರು ಧೈರ್ಯಶಾಲಿ ಮಹಿಳೆಯರು ರಕ್ಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪ್ರಾಣಿ ರಕ್ಷಣಾ ವಿಡಿಯೋ 'ಮನುಷ್ಯತ್ವ ಇನ್ನೂ ಜೀವಂತವಾಗಿದೆ' ಎಂದು ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದು, ದುಃಖಿತ ಜನರಿಗೆ ಸಣ್ಣ ಸಮಾಧಾನ ತಂದಿದೆ.

ಬೆಂಗಳೂರು, ಏ.30: ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸುರಿದ ರಣಮಳೆಗೆ ಈಗಾಗಲೇ 9 ಮಂದಿ ಬಲಿಯಾಗಿದ್ದು, ನಗರದಾದ್ಯಂತ ಮರಗಳು ಧರೆಗುರುಳಿವೆ. ಈ ದುರಂತಗಳ ನಡುವೆ, ಪ್ರಾಣಿಪ್ರೇಮ ಮೆರೆಯುವ ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಧಾರಾಕಾರವಾಗಿ ಸುರಿದ ಮಳೆಗೆ ದೊಡ್ಡ ಗಾತ್ರದ ಮರವೊಂದು ರಸ್ತೆಯಲ್ಲಿದ್ದ ಹಸುವಿನ ಮೇಲೆ ಬಿದ್ದಿದೆ. ಮರದ ಭಾರಕ್ಕೆ ಸಿಲುಕಿದ ಹಸುವು ಹೊರಬರಲಾಗದೆ ತೀವ್ರವಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಇಬ್ಬರು ಧೈರ್ಯಶಾಲಿ ಮಹಿಳೆಯರು, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಭಾರೀ ಗಾತ್ರದ ಮರದ ಕೊಂಬೆಗಳನ್ನು ತಮ್ಮ ಶಕ್ತಿ ಮೀರಿ ಪಕ್ಕಕ್ಕೆ ಸರಿಸಿ, ಹಸುವನ್ನು ಸುರಕ್ಷಿತವಾಗಿ ಹೊರತರಲು ಯಶಸ್ವಿಯಾಗಿದ್ದಾರೆ. ಸದ್ಯ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಮನುಷ್ಯತ್ವ ಇನ್ನೂ ಜೀವಂತವಾಗಿದೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. 9 ಜನರ ಸಾವಿನ ಸುದ್ದಿಯಿಂದ ಕಂಗಾಲಾಗಿದ್ದ ಜನರಿಗೆ ಈ ವಿಡಿಯೋ ಸಣ್ಣ ಸಮಾಧಾನ ನೀಡಿದೆ. ಈ ವಿಡಿಯೋವನ್ನು @gagana_hosmane ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More