My Home Group: ಹೈದ್ರಾಬಾದ್ ಮೈ ಹೋಮ್ ಗ್ರೂಪ್ ಸಂಸ್ಥೆಗೆ ಗ್ರೀನ್ ಸಮ್ಮಿಟ್ ಪ್ರಶಸ್ತಿ
ಭಾರತೀಯ ಉದ್ಯಮ ಒಕ್ಕೂಟದ ಆರನೇ ಆವೃತ್ತಿಯ ಗ್ರೀನ್ ಪ್ರೋ ಸಮ್ಮಿಟ್ ಪ್ರಶಸ್ತಿಯನ್ನು ಮೈ ಹೋಮ್ ಇಂಡಸ್ಟ್ರಿಸ್ ಪಡೆದುಕೊಂಡಿದೆ.
ಬೆಂಗಳೂರು, ಜುಲೈ 20: ಭಾರತೀಯ ಉದ್ಯಮ ಒಕ್ಕೂಟದ ಆರನೇ ಆವೃತ್ತಿಯ ಗ್ರೀನ್ ಪ್ರೋ ಸಮ್ಮಿಟ್ ಪ್ರಶಸ್ತಿಯನ್ನು (Green Pro Summit Award) ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರಿಸ್ ಪ್ರೈ ಲಿ. (My Home Industries) ಮತ್ತು ಶ್ರೀ ಜಯಜ್ಯೋತಿ ಸಿಮೆಂಟ್ ಪ್ರೈ. ಲಿ. ಮುಡಿಗೇರಿಸಿಕೊಂಡಿವೆ. ಬೆಂಗಳೂರು ನಗರದ ತಾಜ್ ವೆಸ್ಟ್ ಎಂಡ್ ಹೊಟೇಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯನ್ನು ಮೈ ಹೋಮ್ ಇಂಡಸ್ಟ್ರಿಸ್ನ ಮಾರ್ಕೆಟಿಂಗ್ ಮುಖ್ಯಸ್ಥ ಪಿಜೆ ಮಥಾಯ್ ಮತ್ತು ಜಯಜ್ಯೋತಿ ಸಿಮೆಂಟ್ನ ಕಾರ್ಪೊರೇಟ್ ಮುಖ್ಯಸ್ಥ ಕೆ.ನಾರಾಯಣರಾವ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮ ಉದ್ಘಾಟನೆ ನಂತರ ವಿವಿಧ ಕಂಪನಿಗಳ ಮಲಿಗೆಗಳಿಗೆ ಭೇಟಿ ನೀಡಿದ ಗಣ್ಯರು ಮಾಹಿತಿ ಪಡೆದುಕೊಂಡರು.
ಪ್ರಶಸ್ತಿ ಸ್ವೀಕರಿಸಿದ ನಂತರ ಟಿವಿ9 ಜೊತೆ ಮಾತನಾಡಿದ ಮಥಾಯ್ ಅವರು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಶೀಘ್ರದಲ್ಲೇ ನಾವು ಪರಿಸರ ಸ್ನೇಹಿ ಸಿಮೆಂಟ್ ಮಹಾ ಹೆಚ್ಡಿ ಪ್ಲಸ್ ಸಿಮೆಂಟ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮೈ ಹೋಮ್ ಗ್ರೂಪ್ನ ಡೆಪ್ಯೂಟಿ ಮ್ಯಾನೇಜರ್ ಸತೀಶ್ ಕುಮಾರ್ ಮಾತನಾಡಿ, ಪರಿಸರ ದೃಷ್ಟಿಯಿಂದ ನಮ್ಮ ಕಂಪನಿಯ ಸಿಮೆಂಟ್ ಉತ್ತಮವಾಗಿದೆ. ಬ್ಲಂಡೆಡ್ ಸಿಮೆಂಟ್ ಮೂಲಕ ನಾವು ಪರಿಸರಕ್ಕೆ ಕೊಡುಗೆ ನೀಡುತ್ತಿದ್ದೇವೆ. ಪರಿಸರಕ್ಕೆ ಹಾನಿ ಉಂಟಾಗಬಾರದು ಎಂಬ ಕಾರಣಕ್ಕೆ ನಾವು ಹೆಚ್ಡಿ ಪ್ಲಸ್ ಸಿಮೆಂಟ್ ಪರಿಚಯಿಸುತ್ತಿದ್ದೇವೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ