Bagalkot: ಮಾನಸಿಕ ಅಸ್ವಸ್ಥ ಮಗನೊಂದಿಗೆ ಬದುಕುತ್ತಿರುವ ವಿಧವೆ, ಗೃಹ ಲಕ್ಷ್ಮಿ ಯೋಜನೆಯೇ ಜೀವನಾಧರ ಆಗಲಿದೆ ಅನ್ನುತ್ತಾರೆ!
ಮತ್ತೊಂದು ಕಳವಳಕಾರಿ ಸಂಗತಿಯೆಂದರೆ, ಸುಮಾರು 4 ವರ್ಷದ ಹಿಂದೆ ಇವರ ಹೃದಯದ ಆಪರೇಷನ್ ಆಗಿದ್ದು ಹೆಚ್ಚು ಕೆಲಸ ಮಾಡುವಂತಿಲ್ಲ.
ಬಾಗಲಕೋಟೆ: ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯ (Gruha Lakshmi Scheme) ಪ್ರಕ್ರಿಯೆ ನಿನ್ನೆಯಿಂದ ಆರಂಭಾವಾಗಿದೆ. ಅರ್ಹ ಮಹಿಳೆಯರು ವನ್ ಕೇಂದ್ರಗಳಿಗೆ ತೆರಳಿ ತಮ್ಮ ಅರ್ಜಿಗಳನ್ನು ಅಪ್ಲೋಡ್ ಮಾಡಿಸುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯೊಬ್ಬರೊಂದಿಗೆ ಟಿವಿ9 ಕನ್ನಡ ವಾಹಿನಿಯ ಬಾಗಲಕೋಟೆ ವರದಿಗಾರ ಮಾತಾಡಿದ್ದಾರೆ. ಬಹಳ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಮಹಿಳೆ ಯೋಜನೆಯನ್ನು ಜಾರಿಗೊಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಧನ್ಯತಾಭಾವದೊಂದಿಗೆ ಕೃತಜ್ಞತೆ (gratitude) ಸಲ್ಲಿಸುತ್ತಾರೆ. ಇವರ ಪತಿ ಸುಮಾರು ಹತ್ತು ವರ್ಷಗಳ ಹಿಂದೆಯೇ ನಿಧನಹೊಂದಿದ್ದಾರೆ. ಮಗಳಿಗೆ ಮದುವೆ ಮಾಡಿಕೊಟ್ಟಿದ್ದಾರೆ ಅದರೆ ತಮಗೆ ಈ ಪ್ರಾಯದಲ್ಲಿ ಆಸರೆಯಾಗಬೇಕಿದ್ದ ಮಗನ ತಲೆಗೆ ಪೆಟ್ಟಾಗಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಅವನ ಹೊಣೆಗಾರಿಕೆ ಇವರ ಮೇಲಿದೆ. ಮತ್ತೊಂದು ಕಳವಳಕಾರಿ ಸಂಗತಿಯೆಂದರೆ, ಸುಮಾರು 4 ವರ್ಷದ ಹಿಂದೆ ಇವರ ಹೃದಯದ ಆಪರೇಷನ್ ಆಗಿದ್ದು ಹೆಚ್ಚು ಕೆಲಸ ಮಾಡುವಂತಿಲ್ಲ. ಇಂಥ ಶೋಚನೀಯ ಪರಿಸ್ಥಿತಿ ಬದುಕುತ್ತಿರುವ ತನಗೆ ಗೃಹ ಲಕ್ಷ್ಮಿ ಯೋಜನೆ ಓಯಸಿಸ್ ನಂತೆ ಲಭ್ಯವಾಗಿದೆ ಎಂದು ಮಹಿಳೆ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ