Sign In

By signing in or creating an account, you agree with Associated Broadcasting Company's Terms & Conditions and Privacy Policy.

Hacked to death: ಬಳ್ಳಾರಿಯಲ್ಲಿ ಮಗನ ಬರ್ತ್ ಡೇ ಆಚರಿಸುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತನ ಕಗ್ಗೊಲೆ ಮಾಧ್ಯಮಗಳಿಗೆ ವಿವರಿಸಿದ ಗಾಲಿ ಜನಾರ್ಧನ ರೆಡ್ಡಿ

Hacked to death: ಬಳ್ಳಾರಿಯಲ್ಲಿ ಮಗನ ಬರ್ತ್ ಡೇ ಆಚರಿಸುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತನ ಕಗ್ಗೊಲೆ ಮಾಧ್ಯಮಗಳಿಗೆ ವಿವರಿಸಿದ ಗಾಲಿ ಜನಾರ್ಧನ ರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 20, 2023 | 5:07 PM

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ ನಾಗೇಂದ್ರ ಇಂಥ ಭೀಕರ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಕಲ್ಯಾಣ ರಾಜ್ಯ ಪ್ರಗತಿ ಷಕ್ಷದ (KRPP) ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ನಿನ್ನೆ ಬಳ್ಳಾರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಾಂಗ್ರೆಸ್ ಪಕ್ಷದ ಜೊತೆ ಕಾಣಿಸಿಕೊಳ್ಳುವ ಕೆಲ ಯುವಕರು ಭೀಕರವಾಗಿ ಹತ್ಯೆಗೈದ ಭಯಾನಕ ಸುದ್ದ್ದಿಯನ್ನು ತಿಳಿಸಿದರು. ಕೊಲೆಯಾದ ಕಾರ್ಯಕರ್ತ ಮಹೆಬೂಬ್ ಬಾಷಾ ತನ್ನ 5-ವರ್ಷದ ಮಗನ ಹುಟ್ಟುಹಬ್ಬ ಆಚರಿಸಲು ತಯಾರಿ ನಡೆಸುತ್ತಿದ್ದಾಗ ಹಂತಕರು ಅವರನ್ನು ಫೋನ್ ಮಾಡಿ ಹೊರ ಕರೆದು ಅಮಾನುಷವಾಗಿ ಕೊಚ್ಚಿ ಹಾಕಿದ್ದಾರೆಂದು ರೆಡ್ಡಿ ಹೇಳಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಓಡಾಡುವ ಕೋಳಿ ಆರಿಫ್, ಅಲ್ತಾಫ್ ಮತ್ತು ಸಿರಾಜ್ ಹೆಸರಿನ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ (maximum punishment) ಕೊಡಿಸಬೇಕೆಂದು ಗೃಹ ಸಚಿವ ಜಿ ಪರಮೇಶ್ವರ ಅವರನ್ನು ವಿಧಾನ ಸಭೆಯಲ್ಲಿ ಮನವಿ ಮಾಡಿಕೊಂಡಿರುವುದಾಗಿ ಶಾಸಕರು ಹೇಳಿದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ ನಾಗೇಂದ್ರ ಇಂಥ ಭೀಕರ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ