Assembly Session: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಗೆ ಯೋಗ್ಯತೆ ಇಲ್ವಾ ಅಂತ ಶಾಸಕ ಗಾಲಿ ಜನಾರ್ಧನ ರೆಡ್ಡಿ ಯಾಕೆ ಕೇಳಿದರು?
ರಾಯರೆಡ್ಡಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ದಾಖಲೆಗಳನ್ನು ತೋರಿಸಲು ಎದ್ದಾಗ ಜನಾರ್ಧನ ರೆಡ್ಡಿ, ಇದನ್ನೆಲ್ಲ ರಾಯರೆಡ್ಡಿ ಯಾಕೆ ಪ್ರಸ್ತಾಪಿಸುತ್ತಿದ್ದಾರೆ ಅಂತ ಕೇಳುತ್ತಾರೆ.
ಬೆಂಗಳೂರು: ಹಂಪಿ ಮತ್ತು ಆನೆಗುಂದಿ ವಿಖ್ಯಾತ ಪ್ರವಾಸೋದ್ಯಮ ಹಾಗೂ ಪುಣ್ಯ ಕ್ಷೇತ್ರಗಳಾಗಿವೆ, ಮತ್ತು ಸುಮಾರು 64,000 ಜನರ ಬದುಕು ಅಲ್ಲಿನ ಪ್ರವಾಸೋದ್ಯಮ ಮೇಲೆ ಆಧಾರವಾಗಿದೆ, ಆದರೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಅಲ್ಲಿ ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆ ಜೋರಾಗಿದೆ ಅಂತ ಹೇಳಿದ್ದು ಅ ಜನರ ಬದುಕುಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಸದನದಲ್ಲಿ ಇಂದು ಹೇಳಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಹೇಳಿದರು. ರಾಯರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ದಾಖಲೆಗಳನ್ನು ತೋರಿಸಲು ಎದ್ದಾಗ ರೆಡ್ಡಿ, ಇದನ್ನೆಲ್ಲ ಬಸವರಾಜ ರಾಯರೆಡ್ಡಿ ಯಾಕೆ ಪ್ರಸ್ತಾಪಿಸುತ್ತಿದ್ದಾರೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರಿಗೆ ಯೋಗ್ಯತೆ ಇಲ್ಲವಾ ಎಂದು ಕೇಳುತ್ತಾರೆ ಮತ್ತು ತಂಗಡಗಿ ಕಡೆ ತಿರುಗಿ ಸಚಿವರೇ, ನೀವು ಎದ್ದು ನಿಂತು ಮಾತಾಡಬೇಕು ಅನ್ನುತ್ತಾರೆ. ಅವರು ಬಳಸಿದ ಯೋಗ್ಯತೆ ಪದ ಚರ್ಚೆಗೆ ಗ್ರಾಸವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ