UT Khader; ಕೋಮು ದಳ್ಳುರಿಗೆ ಹೆಸರಾದ ಕರಾವಳಿ ಪ್ರದೇಶದಲ್ಲಿ ಯುಟಿ ಖಾದರ್ ಶಾಸಕನಾಗಿ ನಿರ್ವಹಿಸಿದ ಕೆಲಸ ಶ್ಲಾಘನೀಯ: ಗಾಲಿ ಜನಾರ್ಧನ ರೆಡ್ಡಿ
ಬಹಳ ವರ್ಷಗಳ ನಂತರ ಜನಾರ್ಧನ ರೆಡ್ಡಿ ಒಬ್ಬ ಜನ ಪ್ರತಿನಿಧಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ.
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ (Kalyana Karnataka Pragati Paksha) ಏಕೈಕ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಇಂದು ಸದನದಲ್ಲಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಯುಟಿ ಖಾದರ್ (UT Khader) ಅವರನ್ನು ತಮ್ಮ ಪಕ್ಷದ ವತಿಯಿಂದ ಅಭಿನಂದಿಸಿದರು. ಭಾಷಣದಲ್ಲಿ ಅವರು ಖಾದರ್ ಅವರ ಸರಳ ಮತ್ತು ಸಜ್ಜನಿಕೆ ಸ್ವಭಾವವನ್ನು ಕೊಂಡಾಡಿದರು. ಕರಾವಳಿ ಭಾಗ ಮತೀಯ ಗಲಭೆಗಳಿಗೆ ಕುಖ್ಯಾತಿ ಪಡೆದಾಗ್ಯೂ ಒಬ್ಬ ಶಾಸಕರಾಗಿ ಖಾದರ್ ಅವರು ನಡೆದುಕೊಂಡ ರೀತಿ ಮತ್ತು ಅತ್ಯಂತ ಸಂವೇದನಾಶೀಲತೆಯಿಂದ ನೀಡುತ್ತಿದ್ದ ಹೇಳಿಕೆಗಳನ್ನು ರೆಡ್ಡಿ ಶ್ಲಾಘಿಸಿದರು. ಬಹಳ ವರ್ಷಗಳ ನಂತರ ಜನಾರ್ಧನ ರೆಡ್ಡಿ ಒಬ್ಬ ಜನ ಪ್ರತಿನಿಧಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹೋದ ಜೀವ ವಾಪಸ್ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?

