ಶಿವಕುಮಾರ್​ರನ್ನು ಆಶೀರ್ವದಿಸಿ ಕಳಿಸಿದ್ದೇವೆ, ಮುಖ್ಯಮಂತ್ರಿ ಯಾರಾಗುತ್ತಾರೆ ಅಂತ ಹೇಳಲು ನಾನು ಭಗವಂತನಲ್ಲ: ಕರಿವೃಷಭ ದೇಶಿಕೇಂದ್ರ ಶ್ರೀಗಳು

ಅರುಣ್​ ಕುಮಾರ್​ ಬೆಳ್ಳಿ

Updated on: May 14, 2023 | 5:10 PM

ರಾಜ್ಯದ ಬಡಜನರ, ರೈತರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುವ ನಾಯಕನ ಅಗತ್ಯವಿದೆ ಎಂದ ಶ್ರೀಗಳು ಹೇಳಿದರು

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ತಿಪಟೂರಿನಲ್ಲಿರುವ ನೊಣವಿನಕೆರೆ ಅಜ್ಜಯ್ಯ (Nonavinakere Ajjaiah) ಪೀಠಕ್ಕೆ ಭೇಟಿ ನೀಡಿ ಕರಿವೃಷಭ ದೇಶಿಕೇಂದ್ರ ಶ್ರೀಗಳ (Shri Karivrishabha Deshikendra seer) ಆಶೀರ್ವಾದ ಪಡೆದರು. ಶಿವಕುಮಾರ್ ಅಲ್ಲಿಂದ ತೆರಳಿದ ಬಳಿಕ ಸುದ್ದ್ದಿಗಾರರೊಂದಿಗೆ ಮಾತಾಡಿದ ಶ್ರೀಗಳು ಶಿವಕುಮಾರ್ ಅವರಿಗೆ ಆಶೀರ್ವಾದ, ಸಂಕಲ್ಪ ನೀಡಿ ಕಳಿಸಿರುವುದಾಗಿ ಹೇಳಿದರು. ರಾಜ್ಯದ ಬಡಜನರ, ರೈತರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುವ ನಾಯಕನ ಅಗತ್ಯವಿದೆ. ರಾಜಾ ಪ್ರತ್ಯಕ್ಷ ದೇವತಾ ಎನ್ನುವ ಹಾಗೆ ಪ್ರಜೆಗಳ ಬಗ್ಗೆ ತಾರತಮ್ಯ ತೋರದೆ ಎಲ್ಲರನ್ನೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ನಾಯಕ ಬೇಕಾಗಿದೆ, ಆ ಆಶೀರ್ವಾದವನ್ನು ಅವರಿಗೆ ನೀಡಿದ್ದೇವೆ ಎಂದ ಶ್ರೀಗಳು, ಯಾರಿಗೆ ಮುಖ್ಯಮಂತ್ರಿಯಾಗುವ ಯೋಗ ಇದೆಯೋ ಅವರು ಸ್ಥಾನ ಪಡೆಯುತ್ತಾರೆ, ನಿರ್ದಿಷ್ಟವಾಗಿ ಇವರೇ ಆಗುತ್ತಾರೆ ಅಂತ ಹೇಳಲು ತಾವು ಭಗವಂತನಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.