AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿಗೆ ಉನ್ನತ ಹುದ್ದೆ ಏರುವ ಭವಿಷ್ಯ ನುಡಿದಿದ್ದ ಶ್ರೀ ಗಳು

ಬಸವರಾಜ ಬೊಮ್ಮಾಯಿಗೆ ಉನ್ನತ ಹುದ್ದೆ ಸಿಗುತ್ತೆ ಎಂದು 2 ತಿಂಗಳ ಹಿಂದೆಯೇ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಭವಿಷ್ಯ ನುಡಿದಿದ್ದರು. ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯಿರುವ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು.

ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿಗೆ ಉನ್ನತ ಹುದ್ದೆ ಏರುವ ಭವಿಷ್ಯ ನುಡಿದಿದ್ದ ಶ್ರೀ ಗಳು
ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು
Follow us
TV9 Web
| Updated By: ಆಯೇಷಾ ಬಾನು

Updated on:Jul 28, 2021 | 9:42 AM

ತುಮಕೂರು: ಯಡಿಯೂರಪ್ಪ ರಾಜೀನಾಮೆ ಬಳಿಕ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯದ 30ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇಂದು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳ ಭವಿಷ್ಯ ನಿಜವಾಗಿದೆ.

ಬಸವರಾಜ ಬೊಮ್ಮಾಯಿಗೆ(basavaraj bommai) ಉನ್ನತ ಹುದ್ದೆ ಸಿಗುತ್ತೆ ಎಂದು 2 ತಿಂಗಳ ಹಿಂದೆಯೇ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಭವಿಷ್ಯ ನುಡಿದಿದ್ದರು. ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯಿರುವ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಈ ವೇಳೆ ಶ್ರೀಗಳು ಉನ್ನತ ಹುದ್ದೆ ಏರುವ ಭವಿಷ್ಯ ನುಡಿದಿದ್ದರು. ಬೊಮ್ಮಾಯಿ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗಲಿ ಅಂತಾ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದರು. ಶ್ರೀಗಳ ಆಶೀರ್ವಾದದಂತೆ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

basavaraj bommai

ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿಗೆ ಉನ್ನತ ಹುದ್ದೆ ಏರುವ ಭವಿಷ್ಯ ನುಡಿದಿದ್ದ ಶ್ರೀ ಗಳು

ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲಿ -ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಶ್ರೀ ಗಳು ರಾಜಕೀಯ ಬೆಳವಣಿಗೆ ವ್ಯವಸ್ಥೆಯಲ್ಲಿ ಅನುಭವದ ಹಾದಿಯಲ್ಲಿ ಜೀವನಪರ್ಯಂತರ ಸಾಧಕರಾಗಿರುವ ಯಡಿಯೂರಪ್ಪ ನಾಲ್ಕು ಸಲ ಅಧಿಕಾರ ವಹಿಸಿಕೊಂಡು ಪೂರ್ಣ ಮಾಡದೇ ಇದ್ದದ್ದು ದುರದೃಷ್ಟ. ನಾಲ್ಕನೇ ಸಲ ಅಧಿಕಾರ ವಹಿಸಿದ ಬಳಿಕ ಸುನಾಮಿ, ಕೋವಿಡ್ ಬಂತು. ಇದರ ಮಧ್ಯೆ 75 ವಯಸ್ಸಿನಲ್ಲೂ 25 ರ ಹುಡುಗನಂತೆ ಕೆಲಸ ಮಾಡಿದ್ದಾರೆ. ರಾಜ್ಯದ ರೈತ ಬಾಂಧವರ ಬಡವ, ಬಲ್ಲಿದರ ಎಲ್ಲಾ ಮತಬಾಂಧವರಲ್ಲಿ ಪ್ರೀತಿ ವಿಶ್ವಾಸ ಗಳಿಸಿ, ಆರೋಗ್ಯ ಗಮನಿಸಿಕೊಂಡು ಉತ್ತಮ ಸಾಧನೆ ಮಾಡಿದ ಯಡಿಯೂರಪ್ಪನವರ ದುರಾದೃಷ್ಟ. ಬಳಿಕ ನಿವೃತ್ತರಾಗಿ ವೀರಶೈವ ಲಿಂಗಾಯತ ಭವಿಷ್ಯದಲ್ಲಿ ಉತ್ತಮವಾಗಿರುವ ವ್ಯಕ್ತಿ ಗುರ್ತಿಸಿರೋದು ಸಂತೋಷ.

ಎರಡು ತಿಂಗಳ ಹಿಂದೆಯೇ ಶ್ರೀ ಮಠಕ್ಕೆ ಬಸವರಾಜ್ ಬೊಮ್ಮಾಯಿ, ಶ್ರೀ ರಾಮುಲು ಮಠಕ್ಕೆ ಭೇಟಿ ನೀಡಿದ್ದರು. ಕಾಡಸಿದ್ದೇಶ್ವರ ಗದ್ದುಗೆಗೆ ಸಂಕಲ್ಪ ಮಾಡಿ ಆಶಿರ್ವಾದ ಪಡೆದ ಬೊಮ್ಮಾಯಿ ಅವರ ತಂದೆ ಕಾಲದಿಂದಲೂ ಕೂಡ ರಾಜಕೀಯ ಅನುಭವದಿಂದ ಬಂದಿದ್ದಾರೆ. ಯಡಿಯೂರಪ್ಪನವರ ಬಲಗೈ ಬಂಟನಾಗಿ ಆತ್ಮವಿಶ್ವಾಸ ಬೆಳೆಸಿಕೊಂಡು ಬಂದಿರುವ ಬೊಮ್ಮಾಯಿಯವರು 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ರೈತ ಬಾಂಧವರ, ಬಡವ ಬಲ್ಲಿದರ ಪ್ರೀತಿ ವಿಶ್ವಾಸ ಗಳಿಸಿ ದಕ್ಷತೆಯಿಂದ ಅಧಿಕಾರ ಪೂರ್ಣಗೊಳಿಸುತ್ತಾರೆ. ಅಧಿಕಾರ ಪೂರ್ಣಗೊಳಿಸಲಿ ಎಂದು ಮಠದಿಂದ ಆಶಿರ್ವಾದ. ವೈಯಕ್ತಿಕ ಚಿಂತನೆಯಲ್ಲಿ ಶ್ರೀ ಮಠದ ದರ್ಶನ ಮಾಡಿ ಗುರುಗಳ ಆಶಿರ್ವಾದ ಪಡೆದಿದ್ದರು. ಗುರುಗಳೇ ನನ್ನ ಬೆಳವಣಿಗೆಗೆ ನಿಮ್ಮ ಆಶಿರ್ವಾದ ಬೇಕು ಅಂತಾ ಸಂಕಲ್ಪ ಮಾಡಿದ್ದರು. ಶ್ರೀ ಗಳು (ಗಂಗಾಧರ ಶ್ರೀ) ಉನ್ನತ ಅಧಿಕಾರ ಆರೋಗ್ಯ ಭಾಗ್ಯ ದೊರಕುತ್ತದೆ ಅಂತಾ ಆಶಿರ್ವಾದ ಮಾಡಿದ್ದರು. ಹೀಗಾಗಿ ಉನ್ನತ ಅಧಿಕಾರ ಪಡೆದಿದ್ದಾರೆ. ಜೊತೆಗೆ ಶ್ರೀರಾಮುಲು ಕೂಡ ಮಠಕ್ಕೆ ಭೇಟಿ ನೀಡಿದ್ದರು. ಎರಡು ದಿನ ಇದ್ದು ಇಷ್ಟಲಿಂಗ ಪೂಜೆ ನೇರವೇರಿಸಿದ್ದರು. ಅವರಿಗೂ ಅಧಿಕಾರ ಸಿಕ್ಕಿದೆ. ಅವರಿಗೆ ಆರೋಗ್ಯ ಭಾಗ್ಯ ಸಿಗಲಿ. ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಲಿ. ಬಸವರಾಜ್ ಬೊಮ್ಮಾಯಿ ಹಾಗೂ ಶ್ರೀ ರಾಮುಲುಗೆ ಶ್ರೀ ಗಳ ಆಶಿರ್ವಾದ ಇದೆ ಎಂದು ಶ್ರೀ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮಿಜಿ ಹೇಳಿದ್ರು.

basavaraj bommai

ಬೊಮ್ಮಾಯಿ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗಲಿ ಅಂತಾ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದರು

ಇದನ್ನೂ ಓದಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು ಏನು ಗೊತ್ತಾ?

Published On - 9:24 am, Wed, 28 July 21