ಹೆಲಿಪ್ಯಾಡ್ ಬಳಿ ಉಂಟಾದ ಸ್ಥಿತಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ: ಬಿಎಸ್ ವೈ ಚಾಪರ್ ಪೈಲಟ್

ಅರುಣ್​ ಕುಮಾರ್​ ಬೆಳ್ಳಿ

Updated on: Mar 06, 2023 | 4:32 PM

ಅಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ಮಾತಾಡಿರುವ ಪೈಲಟ್ ಜೋಸೆಫ್ ಅಂಥ ಸ್ಥಿತಿಯಲ್ಲಿ ಚಾಪರನ್ನು ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಕಲಬುರಗಿ: ಬಿಎಸ್ ಯಡಿಯೂರಪ್ಪವರನ್ನು (BS Yediyurappa) ಹೊತ್ತ ಹೆಲಿಕಾಪ್ಟರ್ ಇಂದ ಕಲಬುರಗಿ ಜಿಲ್ಲೆ ಜೇವರ್ಗಿ (Jewargi) ಪಟ್ಟಣದ ಹೊರವಲಯದಲ್ಲಿ ಲ್ಯಾಂಡ್ ಆಗುವಾಗ ಎದುರಾದ ಸಮಸ್ಯೆಯನ್ನು ಈಗಾಗಲೇ ವರದಿ ಮಾಡಿದ್ದೇವೆ. ಅಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ಮಾತಾಡಿರುವ ಪೈಲಟ್ ಜೋಸೆಫ್ (pilot Joseph) ಅಂಥ ಸ್ಥಿತಿಯಲ್ಲಿ ಚಾಪರನ್ನು ಲ್ಯಾಂಡ್ ಮಾಡುವುದು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಲ್ಯಾಂಡ್ ಮಾಡಿದ್ದರೆ ಏನಾಗುತಿತ್ತು ಅಂತ ಕೇಳಿದ ಪ್ರಶ್ನೆಗೆ ಹಾಗೆಲ್ಲ ಊಹೆಗಳನ್ನು ಮಾಡುವುದು ತನ್ನಿಂದಾಗದು ಎಂದು ಅವರು ಹೇಳಿದರು. ಪೈಲಟ್ ಹೆಚ್ಚು ಮಾತಾಡುವ ಗೋಜಿಗೆ ಹೋಗದೆ ಎಲ್ಲವನ್ನು ನೀವೇ ನಿಮ್ಮ ನಿಮ್ಮ ಮಾಧ್ಯಮಗಳಲ್ಲಿ ತೋರಿಸಿರುವಿರಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 06, 2023 04:32 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.