ಮರ್ಯಾದೆಯಿಲ್ಲದೆ ಸಚಿವ ಸ್ಥಾನಗಳಲ್ಲಿ ಕುಳಿತಿರುವವರು ರಾಜ್ಯ ಲೂಟಿ ಮಾಡಲು ಅನುಕೂಲವಾಗಲಿ ಅಂತ ವಿದೇಶಕ್ಕೆ ಹೋಗಿದ್ದೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Aug 14, 2023 | 10:44 AM

ಕೌಲಾಲಂಪುರದಿಂದ ವಿಮಾನವೊಂದರಲ್ಲಿ ಅವರು ಕೆಐಎ ಏರ್ಪೋರ್ಟ್ ನಲ್ಲಿ ಬಂದಿಳಿದರೂ ಮಲೇಶಿಯಾಗೆ ಹೋಗಿರಲಿಲ್ಲ, ಕಾಂಬೋಡಿಯಗೆ ಹೋಗಿದ್ದು ಅವರು ಸುದ್ದಿಗಾರರಿಗೆ ಹೇಳಿದರು. ಕಳೆದ ವಾರವಷ್ಟೇ ಅವರು ಕುಟುಂಬದೊಂದಿಗೆ ವಿದೇಶ ಯುರೋಪ್ ಪ್ರವಾಸ ತೆರಳಿ ಹಿಂತಿರುಗಿದ್ದರು.

ಬೆಂಗಳೂರು: ಜೆಡಿಎಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ವಿದೇಶ ಪ್ರವಾಸ ಮುಗಿಸಿಕೊಂಡು ಕಳೆದ ರಾತ್ರಿ ರಾಜ್ಯ ರಾಜಧಾನಿಗೆ ವಾಪಸ್ಸಾದರು. ಕೌಲಾಲಂಪುರದಿಂದ (Kuala Lumpur) ವಿಮಾನವೊಂದರಲ್ಲಿ ಅವರು ಕೆಐಎ ಏರ್ಪೋರ್ಟ್ ನಲ್ಲಿ ಬಂದಿಳಿದರೂ ಮಲೇಶಿಯಾಗೆ ಹೋಗಿರಲಿಲ್ಲ, ಕಾಂಬೋಡಿಯಗೆ (Cambodia) ಹೋಗಿದ್ದು ಅವರು ಸುದ್ದಿಗಾರರಿಗೆ ಹೇಳಿದರು. ಹೋದ ಕಾರಣದ ಬಗ್ಗೆ ಕೇಳಿದಾಗ ನೇರವಾಗಿ ಉತ್ತರ ಹೇಳುವ ಬದಲು ಅವರು, ಮಂತ್ರಿಸ್ಥಾನಗಳಲ್ಲಿ ಮಾನ ಮರ್ಯಾದೆ ಇಲ್ಲದೆ ಕುಳಿತಿರುವ ಕೆಲವರು ಕುಮಾರಸ್ವಾಮಿ ವಿದೇಶದಲ್ಲೇ ಇರಲಿ, ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಡ್ತೀವಿ ಅಂತ ಹೇಳಿದ್ದಾರಲ್ಲ? ಅವರು ರಾಜ್ಯವನ್ನು ಕೊಳ್ಳೆ ಹೊಡೆಯಲು ಅನುಕೂಲವಾಗಲಿ ಅಂತ ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದರು. ಮುಂದುವರಿದು ಮಾತಾಡಿದ ಕುಮಾರಸ್ವಾಮಿ, ಪಕ್ಷದ ಸಂಘಟನೆಗಾಗಿ ಕಳೆದ 12 ವರ್ಷಗಳಿಂದ ಓಡಾಡುತ್ತಿದ್ದೇನೆ, ಅದೇ ಕಾರಣಕ್ಕೆ ವಿದೇಶಗಳಲ್ಲಿರುವ ಕೆಲ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.