ರೂಪಾ ಅವರ ಫೋಟೋ ಸಹ ನನ್ನಲ್ಲಿದೆ, ಮಹಿಳೆಯರ ಚಾರಿತ್ರ್ಯವಧೆ ನನ್ನಿಂದಾಗದ ಕೆಲಸ: ಗಂಗರಾಜು, ಸಾಮಾಜಿಕ ಕಾರ್ಯಕರ್ತ
ಗಂಗರಾಜು ಅವರಲ್ಲಿ ರೂಪಾ ಅವರ ಫೋಟೋ ಸಹ ಇದೆಯಂತೆ. ಅದನ್ನೂ ತಾನು ಬಹಿರಂಗಗೊಳಸುವುದಿಲ್ಲ ಅಂತ ಅವರು ಖಡಾಖಂಡಿತವಾಗಿ ಹೇಳುತ್ತಾರೆ.
ಮೈಸೂರು: ತಮ್ಮ ಸಂಭಾಷಣೆಯ ಆಡಿಯೋ ರಿಲೀಸ್ ಮಾಡಿದ ನಗರದ ಸಾಮಾಜಿಕ ಕಾರ್ಯಕರ್ತ ಗಂಗರಾಜು (Gangaraju) ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಡಿ ರೂಪಾ (D Roopa Moudgil) ಹೇಳಿದ್ದಾರೆ. ಅದರೆ ಗಂಗರಾಜು ಎಲ್ಲಾದಕ್ಕೂ ಸಿದ್ಧರಾಗಿರುವಂತೆ ಅವರ ಮಾತುಗಳಿಂದ ಭಾಸವಾಗುತ್ತದೆ. ರೂಪಾ ಅವರು ರೋಹಿಣಿಯವರ ಪೋಟೋ ಹಾಗೂ ವಿಡಿಯೋಗಳನ್ನು ಗಂಗರಾಜು ಅವರಿಗೆ ಕಳಿಸಿ ಅವುಗಳನ್ನು ಸಾರ್ವಜನಿಕಗೊಳಿಸುವಂತೆ (public) ಒತ್ತಡ ಹೇರಿದ್ದಾರೆ. ಸಜ್ಜನ ಮತ್ತು ಸದ್ಗೃಹಸ್ಥರಾಗಿರುವ ಗಂಗರಾಜು ಒಬ್ಬ ಮಹಿಳೆಯ ಚಾರಿತ್ರ್ಯವಧೆ ಮಾಡುವುದು ತನ್ನಿಂದ ಅಸಾಧ್ಯ ಎಂದಿದ್ದಾರೆ. ಗಂಗರಾಜು ಅವರಲ್ಲಿ ರೂಪಾ ಅವರ ಫೋಟೋ ಸಹ ಇದೆಯಂತೆ. ಅದನ್ನೂ ತಾನು ಬಹಿರಂಗಗೊಳಸುವುದಿಲ್ಲ ಅಂತ ಅವರು ಖಡಾಖಂಡಿತವಾಗಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos