ಸಿನಿಮಾ ರಿಲೀಸ್ಗೂ ಮೊದಲೂ ದರ್ಶನ್ ಆಶೀರ್ವಾದ ಪಡೆಯುತ್ತೇನೆ; ಝೈದ್ ಖಾನ್
ನಟ ಝೈದ್ ಖಾನ್ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ಮುಂದಿನ ಚಿತ್ರ ‘ಕಲ್ಟ್’ ಮುಂದಿನ ವರ್ಷ ಜನವರಿ 23ರಂದು ರಿಲೀಸ್ ಆಗಲಿದೆ. ಈ ವೇಳೆ ಅವರು ಕೆಲವು ವಿಷಯಗಳನ್ನು ಮಾತನಾಡಿದ್ದಾರೆ. ಮುಖ್ಯವಾಗಿ ದರ್ಶನ್ ವಿಷಯವನ್ನು ಅವರು ಪ್ರಸ್ತಾಪ ಮಾಡಿದ್ದಾರೆ.
ನಟ ಝೈದ್ ಖಾನ್ ಅವರ ನಟನೆಯ ‘ಕಲ್ಟ್’ ಸಿನಿಮಾ ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಅಣ್ಣ ಅಂತ ಯಾರೂ ಇಲ್ಲ. ಆದರೆ, ದರ್ಶನ್ ಆ ಸ್ಥಾನ ತುಂಬಿದ್ದಾರೆ. ನನ್ನ ಸಿನಿಮಾ ರಿಲೀಸ್ಗೂ ಮೊದಲು ಅವರು ಜೈಲಿನಿಂದ ಹೊರ ಬರುತ್ತಾರೆ ಎನ್ನುವ ನಂಬಿಕೆ ಇದೆ. ಬರದೇ ಇದ್ದರೆ ನಾನೇ ಹೋಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರುತ್ತೇನೆ’ ಎಂದಿದ್ದಾರೆ ಝೈದ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
