ಸದ್ಯಕ್ಕೆ ಸಿದ್ದರಾಮಯ್ಯ ನಮ್ಮ ನಾಯಕರೆನ್ನುವ ಬಗ್ಗೆ ಯಾವುದೇ ಗೊಂದಲ ಬೇಡ: ಡಿಕೆ ಸುರೇಶ್, ಸಂಸದ
ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ ಆದರೆ ಅಂತಿಮವಾಗಿ ತಿರ್ಮಾನ ತೆಗೆದುಕೊಳ್ಳೋರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ವರಿಷ್ಠರು ಎಂದರು. ಮುಂದುವರಿದು ಮಾತಾಡಿದ ಅವರು, ಸದ್ಯಕ್ಕೆ ಸಿದ್ದರಾಮಯ್ಯನವರು ನಮ್ಮ ನಾಯಕರು, ಈ ಬಗ್ಗೆ ಯಾರಲ್ಲೂ ಅನುಮಾನ ಗೊಂದಲ ಬೇಡ ಎಂದು ಹೇಳಿದರು.
ಬೆಂಗಳೂರು: ನಗರದ ಸದಾಶಿವನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸಂಸದ ಡಿಕೆ ಸುರೇಶ್ (DK Suresh), ಕಾಂಗ್ರೆಸ್ ಪಕ್ಷವನ್ನು ಜನ ಐದು ವರ್ಷಗಳ ಅವಧಿಗೆ ಅಧಿಕಾರಕ್ಕೆ ತಂದಿದ್ದಾರೆ, ಪೂರ್ಣಾವಧಿವರೆಗೆ ಒಂದು ಸುಭದ್ರ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗುರಿಯಾಗಿದೆ ಎಂದು ಹೇಳಿದರು. ಸದ್ಯಕ್ಕೆ ಸಿಎಂ ಹುದ್ದೆ ಖಾಲಿಯಿಲ್ಲ, ಖಾಲಿಯಿದ್ದಾಗ ಚರ್ಚೆ ನಡೆಸಿದರೆ ಅದು ಸರಿಯೆನಿಸುತ್ತದೆ ಎಂದು ಹೇಳಿಇದ ಸುರೇಶ್, ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ ಆದರೆ ಅಂತಿಮವಾಗಿ ತಿರ್ಮಾನ ತೆಗೆದುಕೊಳ್ಳೋರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ವರಿಷ್ಠರು ಎಂದರು. ಮುಂದುವರಿದು ಮಾತಾಡಿದ ಅವರು, ಸದ್ಯಕ್ಕೆ ಸಿದ್ದರಾಮಯ್ಯನವರು ನಮ್ಮ ನಾಯಕರು, ಈ ಬಗ್ಗೆ ಯಾರಲ್ಲೂ ಅನುಮಾನ ಗೊಂದಲ ಬೇಡ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ