ಗದಗ: ಕರ್ನಾಟಕ ಸಂಭ್ರಮ ಮೆರವಣಿಗೆಯಲ್ಲಿ ಶಿವಕುಮಾರ್, ಸಿದ್ದರಾಮಯ್ಯರಿಂದ ‘ಅಂತರ’ ಕಾಯ್ದುಕೊಂಡಿದ್ದು ಆಕಸ್ಮಿಕವೋ?
ಭುವನೇಶ್ವರಿ ದೇವಿಯ ಸಾರೋಟಿನ ಹಿಂದೆ ಒಂದು ಅಲಂಕೃತ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹಲವು ಸಚಿವರು, ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಇದ್ದಾರೆ ಮತ್ತು ಪಾಟೀಲ್ ಪಕ್ಕ ಶಿವಕುಮಾರ್ ಅನ್ಯಮನಸ್ಕನಂತೆ ನಿಂತಿದ್ದಾರೆ!
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ವೈಮನಸ್ಸು ಇರೋದು ನಿಜವಾದರೂ ಅವರಿಬ್ಬರ ಸಾರ್ವಜನಿಕ ವರ್ತನೆಯಿಂದ ಅದು ದೂರವಾಗಿರಬಹುದೆಂಬ ಭಾವನೆ ಕನ್ನಡಿಗರಲ್ಲಿ ಆಗಾಗ ಮೂಡುತ್ತದೆ. ನಿನ್ನೆ ಸಿದ್ದರಾಮಯ್ಯ ಪೂರ್ಣಾವಧಿಗೆ ತಾವೇ ಮುಖ್ಯಮಂತ್ರಿ ಹೇಳಿದ್ದು ಪ್ರಾಯಶಃ ಡಿಸಿಎಂ ಅವರಲ್ಲಿ ಅಸಮಾಧಾನ ಮೂಡಿಸಿರಬಹುದು. ಮೈಸೂರು ರಾಜ್ಯ (Mysuru State) ಕರ್ನಾಟಕ ಅಂತ ಪುನರ್ ನಾಮಕರಣಗೊಂಡು 50 ವರ್ಷಗಳು ಕಳೆದಿರುವ ಹಿನ್ಲೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಈ ವರ್ಷವಿಡೀ ಕರ್ನಾಟಕ ಸಂಭ್ರಮ ಆಚರಿಸಲುಲ ನಿರ್ಧರಿಸಿದ್ದು ಅದರ ಭಾಗವಾಗಿ ಗದಗನಲ್ಲಿ ತಾಯಿ ಭುವನೇಶ್ವರಿಯ ಮೆರವಣಿಗೆ ನಡೆಯಿತು. ಟಿವಿ9 ಕನ್ನಡ ವಾಹಿನಿಯ ಗದಗ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ನಗರದ ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೊಸೈಟಿವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಭುವನೇಶ್ವರಿ ದೇವಿಯ ಸಾರೋಟಿನ ಹಿಂದೆ ಒಂದು ಅಲಂಕೃತ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹಲವು ಸಚಿವರು, ಕಾಂಗ್ರೆಸ್ ನಾಯಕರಿದ್ದಾರೆ. ಮೇಲೆ ಚರ್ಚಿಸಿದ ವಿಷಯದ ಅಂಶವನ್ನು ಇಲ್ಲಿ ಗಮನಿಸಬಹುದು. ಸಿದ್ದರಾಮಯ್ಯ ಪಕ್ಕದಲ್ಲಿ ಸಚಿವ ಹೆಚ್ ಕೆ ಪಾಟೀಲ್ ಇದ್ದಾರೆ ಮತ್ತು ಪಾಟೀಲ್ ಪಕ್ಕ ಶಿವಕುಮಾರ್ ಅನ್ಯಮನಸ್ಕನಂತೆ ನಿಂತಿದ್ದಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ