Video: ಹಳೆಯ ಕಮಾನು ಕೆಡುಗುವಾಗ ಮೇಲೆ ಬಿದ್ದ ಅವಶೇಷಗಳು, ಜೆಸಿಬಿ ಚಾಲಕ ಸಾವು

Updated on: Feb 13, 2025 | 2:11 PM

ತಮಿಳುನಾಡಿನ ಮಟ್ಟುತಾವಣಿ ಬಸ್ ನಿಲ್ದಾಣದಲ್ಲಿರುವ ಮಧುರೈನ ಕಮಾನು ಕೆಡಗುವ ಸಮಯದಲ್ಲಿ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ಜೆಸಿಬಿ ಚಾಲಕ ಸಾವನ್ನಪ್ಪಿದ್ದು, ಗುತ್ತಿಗೆದಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. 5ನೇ ವಿಶ್ವ ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ 1981 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕಮಾನು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿತ್ತು.

ತಮಿಳುನಾಡಿನ ಮಟ್ಟುತಾವಣಿ ಬಸ್ ನಿಲ್ದಾಣದಲ್ಲಿರುವ ಮಧುರೈನ ಕಮಾನು ಕೆಡಗುವ ಸಮಯದಲ್ಲಿ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ಜೆಸಿಬಿ ಚಾಲಕ ಸಾವನ್ನಪ್ಪಿದ್ದು, ಗುತ್ತಿಗೆದಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
5ನೇ ವಿಶ್ವ ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ 1981 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕಮಾನು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಕೆಡವಲು ಅವಕಾಶ ನೀಡಲಾಗಿತ್ತು. ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಕೆಡವಲು ಪ್ರಾರಂಭಿಸಿದಾಗ, ಕಮಾನಿನ ಒಂದು ಬದಲಿಯ ಕಂಬ ಕುಸಿದು ಜೆಸಿಬಿ ಚಾಲಕನ ಮೇಲೆ ಬಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More