CM takes on BJP: ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಅಕ್ಕಿ ನೀಡುವಂತೆ ಕೇಂದ್ರವನ್ನು ಯಾಕೆ ಒತ್ತಾಯಿಸಬಾರದು? ಸಿದ್ದರಾಮಯ್ಯ

|

Updated on: Jun 27, 2023 | 3:44 PM

ಮರುದಿನವೇ ಎಫ್ ಸಿ ಐ ಅಕ್ಕಿ ಕೊಡಲಾಗದು ಅಂತ ಹೇಳುತ್ತದೆ, ಇಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೆ ಅಂತ ಗೊತ್ತಾಗುವುದಿಲ್ಲವೇ ಅಂತ ಕೇಳಿದರು.

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಮತ್ತೊಮ್ಮೆ ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಹಾಸನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಯಾವ ನೈತಿಕ ಆಧಾರದ ಮೇಲೆ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಾರಂತೆ ಅಂತ ಪ್ರಶ್ನಿಸಿದರು. ಅನ್ನಭಾಗ್ಯ ಯೋಜನೆ ಮಾಡುವಾಗ ತಾವು ಬಿಎಸ್ ಯಡಿಯೂರಪ್ಪ (BS Yediyurappa) ಇಲ್ಲವೇ ಆರ್ ಅಶೋಕ (R Ashoka) ಅವರನ್ನು ಕೇಳಬೇಕಿತ್ತಾ ಅಂತ ಪ್ರಶ್ನಿಸಿದ ಸಿದ್ದರಾಮಯ್ಯ ಕೇಂದ್ರ ಆಹಾರ ನಿಗಮ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡುವುದಾಗಿ ಹೇಳಿ ಪತ್ರ ಕೂಡ ಬರೆದಿದೆ. ಆದರೆ, ಮರುದಿನವೇ ಅಕ್ಕಿ ಕೊಡಲಾಗದು ಅಂತ ಹೇಳುತ್ತದೆ, ಇಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೆ ಅಂತ ಗೊತ್ತಾಗುವುದಿಲ್ಲವೇ ಅಂತ ಕೇಳಿದರು. ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಅಕ್ಕಿ ನೀಡುವಂತೆ ಯಾಕೆ ಹೇಳಬಾರದು, ಅಲ್ಲಿ ಹೋಗಿ ಪ್ರತಿಭಟನೆ ಮಾಡಲಿ ಅಂತ ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ